
ಚಿಕ್ಕಬಳ್ಳಾಪುರ: ಗಂಧದ ಮರಗಳ (Sandalwood) ಕಳವು ಮಾಡಿ ರೈತರಿಗೆ ಕಾಟಕೊಡುತ್ತಿದ್ದ 7 ಜನ ಕಳ್ಳರನ್ನು (Thieves) ಬಟ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತೀರ್ಥಕುಮಾರ್, ಗೌಸ್ ಪಾಷ, ಭರತ್, ಅಪ್ಸರ್ ಪಾಷ, ಶಿವ, ಮನೋಜ್ ಹಾಗೂ ಏಜಾಜ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ 3.20 ಲಕ್ಷ ಮೌಲ್ಯದ 32 ಕೆಜಿ ಶ್ರೀಗಂಧದ ತುಂಡುಗಳ ವಶಕ್ಕೆ ಪಡೆಯಲಾಗಿದೆ
ಬಂಧಿತರೆಲ್ಲರೂ ತುಮಕೂರು ಹಾಗೂ ಹಾಸನ ಜಿಲ್ಲೆಯವರು ಎಂದು ಪ್ರಕಟಣೆ ತಿಳಿಸಿದೆ.
ಚಿಂತಾಮಣಿ ತಾಲ್ಲೂಕಿನ ನಲ್ಲಗುಟ್ಟಹಳ್ಳಿ ಬೊಮ್ಮೇಪಲ್ಲಿ ಗ್ರಾಮಗಳ ತೋಟಗಳಲ್ಲಿ ರೈತರು ಬೆಳೆಸಿದ್ದ ಶ್ರೀಗಂಧ ಮರಗಳ ಕಳ್ಳತನವಾಗಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಬಟ್ಲಹಳ್ಳಿ ಠಾಣೆ ಪೊಲೀಸರು, ತೀವ್ರ ತನಿಖೆ ನಡೆಸಿ ಕಳ್ಳರ ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ.