
ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಮುಂಬರುವ ತೆಲುಗು ಚಿತ್ರ ‘ಧಂಡೋರಾ’ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ, ತೆಲುಗು ನಟ ಶಿವಾಜಿ (Shivaji) ಮಹಿಳೆಯರು ಮತ್ತು ನಾಯಕಿಯರು ಅಶ್ಲೀಲವಾಗಿ ಕಾಣುವ ತುಂಡುಡುಗೆ ತೊಡದೆ, ಮೈ ತುಂಬ ಉಡುಗೆ ತೊಡುವಂತೆ ಸಲಹೆ ನೀಡಿದ್ದು ವ್ಯಾಪಕ ಪರ – ವಿರೋಧಕ್ಕೆ ಕಾರಣವಾಗಿದೆ.
ಮಿಸ್ಸಮ್ಮ, ಸತ್ಯಭಾಮ ಮತ್ತು ಕೋರ್ಟ್ – ಸ್ಟೇಟ್ vs ಎ ನೋಬಡಿ ಮತ್ತು ಬಿಗ್ ಬಾಸ್ ತೆಲುಗು 7 ಕಾರ್ಯಕ್ರಮಗಳ ಪ್ರಸಿದ್ದ 54 ವರ್ಷದ ನಟ ಶಿವಾಜಿ ನಟಿಯರ ತುಂಡುಡುಗೆ ಕುರಿತು ನೀಡಿರುವ ಹೇಳಿಕೆ ವ್ಯಾಪಕ ಪ್ರಶಂಸೆಗೆ ಒಳಗಾಗಿದ್ದರು, ಮಹಿಳಾ ಆಯೋಗ ನೋಟಿಸ್ ನೀಡಿದೆ.
సామాన్లు కనపడేలా డ్రెస్ వేసుకోవడం అందం కాదు
— Milagro Movies (@MilagroMovies) December 22, 2025
:- Actor #Shivaji #Dhandoraapic.twitter.com/eJHxBx3fgv
ಇಷ್ಟಕ್ಕೂ ಶಿವಾಜಿ ನೀಡಿದ ಹೇಳಿಕೆಯನ್ನು ಗಮನಿಸುವುದಾದರೆ, “ಎಲ್ಲಾ ನಾಯಕಿಯರು ದೇಹದ ಭಾಗಗಳನ್ನು ಕಾಣುವಂತೆ ಉಡುಪುಗಳನ್ನು ಧರಿಸಬೇಡಿ ಎಂದು ನಾನು ವಿನಂತಿಸುತ್ತೇನೆ. ದಯವಿಟ್ಟು ಸೀರೆ ಅಥವಾ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಉಡುಪುಗಳನ್ನು ಧರಿಸಿ. ಸೌಂದರ್ಯವು ಸಂಪೂರ್ಣ ಉಡುಗೆ ಅಥವಾ ಸೀರೆಯಲ್ಲಿದೆ, ದೇಹವನ್ನು ( ತೆಲು ಭಾಷೆಯಲ್ಲಿ ಶಿವಾಜಿ ಬಳಸಿದ ಪದ ಸಾಮಾನುಲು) ಪ್ರದರ್ಶಿಸುವುದರಲ್ಲಿ ಅಲ್ಲ ಎಂದಿದ್ದರು.
Now Public Started Realising ✅
— 𝓥𝓲𝓼𝓱𝓷𝓾 (@imVchowdary) December 24, 2025
శివాజీకి పెరుగుతున్న మద్దతు 🔥🔥
పదజాలం విషయంలో కొన్ని తప్పులు ఉండచ్చు కానీ సమాజ శ్రేయస్సు దృష్ట్యా ఆయన మాట్లాడిన భావజాలం మాత్రం తప్పు కాదు అనే భావం పెరుగుతుంది#WeStandWithSivaji #ActorShivaji #Actorsivaji #Sivaji #Shivaji@ActorSivaji 🔥🔥 pic.twitter.com/Yur4CJLQ2P
ಜನರು ಬಹಿರಂಗವಾಗಿ ಏನನ್ನೂ ಹೇಳದಿರಬಹುದು ಏಕೆಂದರೆ ಅದು ನಿಮ್ಮ ಸ್ವಾತಂತ್ರ್ಯ ಎಂದು ಅವರು ಭಾವಿಸುತ್ತಾರೆ, ಆದರೆ ಒಳಗೆ ಅವರಿಗೆ ಅದು ಇಷ್ಟವಾಗದಿರಬಹುದು.
ಮಹಿಳೆ ಪ್ರಕೃತಿಯಂತೆ. ಪ್ರಕೃತಿ ಸುಂದರವಾಗಿದ್ದಾಗ, ನಾವು ಅದನ್ನು ಗೌರವಿಸುತ್ತೇವೆ. ಮಹಿಳೆ ನನ್ನ ತಾಯಿಯಂತೆ, ಅವರನ್ನು ನಾನು ನನ್ನ ಹೃದಯಕ್ಕೆ ಹತ್ತಿರವಾಗಿರಿಸುತ್ತೇನೆ ಎಂದು ಅವರು ಹೇಳಿದರು.
ದಂತಕಥೆ ನಟಿಯರಾದ ಸಾವಿತ್ರಿ ಮತ್ತು ಸೌಂದರ್ಯ, ಅನುಷ್ಕಾ, ಮೀರಾ ಜಾಸ್ಮಿನ್ ಮತ್ತು ಉದಯೋನ್ಮುಖ ತಾರೆ ರಶ್ಮಿಕಾ ಅವರ ಉದಾಹರಣೆಯನ್ನು ಉಲ್ಲೇಖಿಸಿ ಅವರ ಬಗ್ಗೆ ಯಾರಾದ್ರೂ ಕೆಟ್ಟ ದೃಷ್ಟಿಯಿಂದ ನೋಡಲು ಸಾಧ್ಯವೆ..? ಎಂದು ಪ್ರಶ್ನಿಸಿದರು.
ಶಿವಾಜಿ ನಟಿಯರಿಗೆ ಹೊರಗೆ ಹೋಗುವಾಗ ತಮಗೆ ಅನಿಸುವ ಯಾವುದೇ ಬಟ್ಟೆ ಧರಿಸಬೇಡಿ ಏಕೆಂದರೆ ಅದರ ಪರಿಣಾಮಗಳನ್ನು ಅವರು ಅನುಭವಿಸಬೇಕಾಗುತ್ತದೆ ಎಂದು, ಇತ್ತೀಚೆಗೆ ನಟಿಯೋರ್ವರಿಗೆ ಕಿಡಿಗೇಡಿಗಳು ನೀಡಿದ ಉಪಟಳದ ಬಗ್ಗೆ ಎಚ್ಚರಿಕೆ ನೀಡಿ, ಮೇಲಿನಂತೆ ಸಲಹೆ ನೀಡಿದ್ದರು.
ಈ ಹೇಳಿಕೆ ಕುರಿತಂತೆ ವ್ಯಾಪಕ ಬೆಂಬಲ ದೊರೆತಿದ್ದು, ಕೆಲ ನಟಿಯರ ವಿರೋಧಕ್ಕೆ ಕಾರಣವಾಗಿದ್ದು,
ಕ್ಷಮೆ ಯಾಚನೆ
ಅಂತಿಮವಾಗಿ ಇಂದು ಶಿವಾಜಿ ಅವರು ಎಕ್ಸ್ ಖಾತೆಯಲ್ಲಿ ಈ ಮುಂಚೆ ಕಾರ್ಯಕ್ರಮದಲ್ಲಿ ತಾವು ಹೇಳಿದ್ದಕ್ಕೆ ಕ್ಷಮೆಯಾಚಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
I sincerely apologise for my words during the Dhandoraa pre-release event last night.@itsmaatelugu pic.twitter.com/8zDPaClqWT
— Sivaji (@ActorSivaji) December 23, 2025
ಈ ಕ್ಲಿಪ್‌ನಲ್ಲಿ, ಅವರು “ಅಸಂಸದೀಯ ಪದಗಳನ್ನು” ಬಳಸಬಾರದಿತ್ತು ಎಂದು ಹೇಳಿದ್ದಾರೆ. ನಾನು ಎಲ್ಲಾ ಮಹಿಳೆಯರ ಬಗ್ಗೆ ಮಾತನಾಡುತ್ತಿಲ್ಲ, ನಟಿಯರ ಬಗ್ಗೆ ಮಾತ್ರ ಮಾತನಾಡುತ್ತಿರುವುದಾಗಿ ಸ್ಪಷ್ಟಪಡಿಸಿದರು. ಅವರು ಎಚ್ಚರಿಕೆಯಿಂದ ಉಡುಗೆ ತೊಟ್ಟಿದ್ದರೆ ಅವರಿಗೆ ಅನಾನುಕೂಲವಾಗುತ್ತಿರಲಿಲ್ಲ ಎಂದು ಅವರು ಹೇಳಿದರು.
ಯಾವುದೇ ವ್ಯಕ್ತಿಯನ್ನು ಕೀಳಾಗಿ ಕಾಣುವುದು ತಮ್ಮ ಉದ್ದೇಶವಲ್ಲ, ಆದರೆ ಆ ಪದಗಳನ್ನು ಬಳಸಿದ್ದರಿಂದ ಕ್ಷಮೆಯಾಚಿಸಲು ಬಯಸಿದ್ದೇನೆ ಎಂದು ನಟ ವ್ಯಕ್ತಪಡಿಸಿದರು.