
ದೊಡ್ಡಬಳ್ಳಾಪುರ: ನಾಳೆ (ಡಿ.28) ರಂದು ಬೆಸ್ಕಾಂ ನಗರ ಹಾಗೂ ಗ್ರಾಮಾಂತರ ವಿಭಾಗಗಳಿಂದ ತ್ರೈಮಾಸಿಕ ನಿರ್ವಹಣೆ ಕಾರ್ಯ ನಡೆದಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ (Power cut) ಎಂದು ಪ್ರಕಟಣೆ ನೀಡಲಾಗಿದೆ.
ಬೆಸ್ಕಾಂ ನಗರ ಉಪ ವಿಭಾಗದಿಂದ 220/66/11ಕೆವಿ ಕೆಐಎಡಿಬಿ ಹಾಗೂ 66/11ಕೆವಿ ಅಪೇರಲ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ಈ ಉಪಕೇಂದ್ರದಲ್ಲಿರುವ ಎಲ್ಲಾ ವಿದ್ಯುತ್ ಮಾರ್ಗಗಳಲ್ಲಿ ನಾಳೆ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಅಲ್ಲದೆ ಬೆಸ್ಕಾಂ ಗ್ರಾಮಾಂತರ ವಿಭಾಗದಿಂದ ತೂಬಗೆರೆ 66/11 ಕೆ.ವಿ ವಿದ್ಯುತ್ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾರ್ಯ ನಿರ್ವಹಣೆ ಕಾರಣ ಡಿ.28 ರಂದು ಬೆಳಗ್ಗೆ 10:00 ರಿಂದ ಸಂಜೆ 5:30 ರವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು
ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಗ್ರಾಮಗಳು, ಕೆಐಎಡಿಬಿ, ಅಪೇರಲ್ ಪಾರ್ಕ್ ಹಂತ 1, 2 & 3, ಕೆಎಸ್‌ಎಸ್‌ಐಡಿಸಿ ಕೈಗಾರಿಕ ಪ್ರದೇಶಗಳು, ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ಗ್ರಾಮಗಳು, ದೊಡ್ಡತುಮಕೂರು ಗ್ರಾಮ ಪಂಚಾಯಿತಿಯ ಗ್ರಾಮಗಳು, ಅರಳುಮಲ್ಲಿಗೆ ಗ್ರಾಮ ಪಂಚಾಯಿತಿಯ ಗ್ರಾಮಗಳು.
ದೊಡ್ಡಬಳ್ಳಾಪುರ ನಗರದ ಭುವನೇಶ್ವರಿನಗರ, ತೇರಿನ ಬೀದಿ ಸರ್ಕಲ್, ಸಂಜಯನಗರ, ವೀರಭದ್ರನಪಾಳ್ಯ, ಚೈತನ್ಯನಗರ, ವಿದ್ಯಾನಗರ, ಕನಕದಾಸ ರಸ್ತೆ, ಕುಚ್ಚಪ್ಪನಪೇಟೆ, ಕೊಂಗಾಡಿಯಪ್ಪ ಮುಖ್ಯರಸ್ತೆ, ರಂಗಪ್ಪ ಸರ್ಕಲ್.
ಗಾಂಧಿನಗರ, ತೂಬಗೆರೆ ಪೇಟೆ, ಬ್ರಾಹ್ಮಣರ ಬೀದಿ, ಖಾಸಬಾಗ್, ಶ್ರೀನಗರ, ಚಂದ್ರಶೇಖರಪುರ, ರೈಲ್ವೆ ನಿಲ್ದಾಣ, ಅರೇಹಳ್ಳಿ ಗುಡ್ಡದಹಳ್ಳಿ, ಮೂತ್ತೂರು, ಸಿದ್ದೇನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ತೂಬೆಗೆರೆ, ಕಾರನಾಳ, ತೊಗರಿಘಟ್ಟ, ಲಕ್ಷ್ಮೀದೇವಿಪುರ, ಹಾಡೋನಹಳ್ಳಿ, ಮೇಲಿನಜಗಾನಹಳ್ಳಿ, ಕಂಟನಕುಂಟೆ ಘಾಟಿ, ಗೊಲ್ಲಹಳ್ಳಿ, ಅಂತರಹಳ್ಳಿ, ಬಚ್ಚಹಳ್ಳಿ, ತಿರುಮಗೊಂಡನಹಳ್ಳಿ, ಗಂಗಸಂದ್ರ, ಸುಣ್ಣಘಟ್ಟಹಳ್ಳಿ, ಎದ್ದಲಹಳ್ಳಿ, ನಾರಸಿಂಹನಹಳ್ಳಿ, ಕಾಚಹಳ್ಳಿ.
ತೂಬಗೆರೆ 66/11 ಕೆ.ವಿ ವಿದ್ಯುತ್ ಕೇಂದ್ರದಿಂದ ಹೊರಹೊಮ್ಮುವ ಫೀಡರ್ ಗಳಿಂದ ವಿದ್ಯುತ್ ಸರಬರಾಜು ಪಡೆದುಕೊಳ್ಳುವ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದ್ದು ಗ್ರಾಹಕರು ಸಹರಿಸವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ. (ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ)