ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆಗೆ (New Year celebrations) ಕ್ಷಣ ಗಣನೆ ಆರಂಭವಾಗಿರುವ ನಡುವೆ, ವಿಶ್ವ ವಿಖ್ಯಾತ ತಾಣವಾದ ನಂದಿಬೆಟ್ಟಕ್ಕೆ (Nandi Hills) ಪ್ರವೇಶ ನಿಷೇಧಿಸಲಾಗಿದೆ.
ನ್ಯೂ ಇಯರ್ ಸೆಲಬ್ರೇಷನ್ ಮೂಡ್ ನಲ್ಲಿ ಅನಾಹುತ ಆಗುವ ಸಾದ್ಯತೆ ಹಿನ್ನೆಲೆ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲಾಧಿಕಾರಿ ರವೀಂದ್ರ ಪಿ.ಎನ್ ಅವರು ಅದೇಶಿಸಿದ್ದಾರೆ.
ಡಿಸೆಂಬರ್ 31.12.25 ಮದ್ಯಾಹ್ನದಿಂದ 01.01.26 ಮದ್ಯಾಹ್ನದ ವರೆಗೂ ನಂದಿ ಬೆಟ್ಟಕ್ಕೆ ಪ್ರವೇಶ ನಿಷೇದ ಹೇರಲಾಗಿದೆ.
ಇದೇ ವೇಳೆ ನಂದಿ ಬೆಟ್ಟ ಸುತ್ತ ಮುತ್ತಲಿನ ಹೋಟೆಲ್, ಹೋಮ್ ಸ್ಟೇ, ರೆಸಾರ್ಟ್ ಗಳ ಮೇಲೆ ಪೊಲೀಸರು ಹದ್ದಿನ ಕಣ್ಣು ಇಡಲಿದ್ದಾರೆ.
ಕಾನೂನು ಉಲ್ಲಂಘಿಸಿ ಮೋಜು ಮಸ್ತಿ ಮಾಡಿದ್ರೆ ಪ್ರಕರಣ ದಾಖಲಾಗಲಿದೆ.
ಅಲ್ಲಣೆ ಬಾರ್ ಅಂಡ್ ರೆಸ್ಟೋರೆಂಟ್ ಗಳು ನಿಗದಿತ ಅವದಿಗೆ ಕ್ಲೋಸ್ ಮಾಡುವಂತೆ ಎಸ್ಪಿ ಕುಶಲ್ ಚೌಕ್ಸೆ ಎಚ್ಚರಿಕೆ ನೀಡಿದ್ದಾರೆ.
ಇಶಾ ಪೌಂಡೇಶನ್ ಗೆ ಸಾವಿರಾರು ಜನ ಆಗಮಿಸುವ ಹಿನ್ನೆಲೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.