ದೊಡ್ಡಬಳ್ಳಾಪುರ: ಇಂದು ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ, ಬಮೂಲ್ ನಿರ್ದೇಶಕ ದಿವಂಗತ ಹೆಚ್.ಅಪ್ಪಯ್ಯಣ್ಣರ (H. Appayanna) ಜನ್ಮದಿನ. ಅವರ ಸವಿ ನೆನಪಿಗಾಗಿ ತಾಲೂಕಿನ ಹಾಡೋನಹಳ್ಳಿ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಅಭಿಮಾನಿಗಳಿಂದ ರಕ್ತದಾನ ಸೇರಿದಂತೆ ವಿವಿಧ ಜನಪರ ಕಾರ್ಯಕ್ರಮಗಳನ್ನು ಆಯೋಜಿಲಾಗಿತ್ತು.

ಅಲ್ಲದೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣೆ ಆಯೋಜಿಸಲಾಗಿತ್ತು.
ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ನೂರಾರು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ರಕ್ತದಾನ ಶಿಬಿರಕ್ಕೂ ಉತ್ತಮ ಸ್ಪಂದನೆ ದೊರೆಯಿತು.

ಕಾರ್ಯಕ್ರಮದ ಅಂಗವಾಗಿ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಅಲ್ಲದೆ ವೃದ್ಧರಿಗೆ ಊರುಗೋಲು ಹಾಗೂ ಕಂಬಳಿ ವಿತರಣೆಯೂ ನಡೆಯಿತು.

ಇದೇ ವೇಳೆ ಅಪ್ಪಯ್ಯಣ್ಣನವರ ಅಭಿಮಾನಿಗಳಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರಾದ ಮಾಜಿ ಶಾಸಕ, ನಿರ್ಸಗ ನಾರಾಯಣಸ್ವಾಮಿ, ಡಾ. ಆಂಜಿನಪ್ಪ, ಡಾ. ವಿಜಯಕುಮಾರ್, ಅಪ್ಪಯ್ಯಣ್ಣನವರ ಪುತ್ರ ನಾಗರಾಜು, ಜೆಡಿಎಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ. ಮುನೇಗೌಡ, ಮಾಜಿ ಎಂಎಲ್‌ಸಿ ರಮೇಶ್ ಗೌಡ, ಮಾಜಿ ಶಾಸಕರಾದ ಗಂಟಿಗಾನಹಳ್ಳಿ ಕೃಷ್ಣಪ್ಪ, ಚಂದ್ರಣ್ಣ, ಹಿರಿಯ ಬಿಜೆಪಿ ಮುಖಂಡ ಹನುಮಂತರಾಯಪ್ಪ, ತೆಂಗು ನಾರು ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು, ಸಹೋದರ ಹೆಚ್ ನಾರಾಯಣಪ್ಪ ಟಿಎಪಿಸಿಎಂಎಸ್ ಸದಸ್ಯ ಪುರೋಷೋತ್ತಮ, ಜೆಡಿಎಸ್ ಮುಖಂಡರಾದ ಹರೀಶ್ ಗೌಡ, ಹುಸ್ಕೂರು ಆನಂದ್, ಜಗನ್ನಾಥ್, ಮುದ್ದಣ್ಣ, ಬಚ್ಚಹಳ್ಳಿ ನಾಗರಾಜು, ಗೌರೀಶ್, ಯುವ ಮುಖಂಡ ಸೇರಿದಂತೆ ಹಲವರು ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.