ಬೆಂ.ಗ್ರಾ.ಜಿಲ್ಲೆ: ನೆಲಮಂಗಲ ತಾಲ್ಲೂಕಿನ ದಕ್ಷಿಣ ಕಾಶಿ ಶಿವಗಂಗೆ (Shivagange) ಗ್ರಾಮದ ಶ್ರೀ ಗಂಗಾಧರೇಶ್ವರಸ್ವಾಮಿ ಮತ್ತು ಹೊನ್ನಾದೇವಿ ದೇವಸ್ಥಾನದ ವಾರ್ಷಿಕ “ಗಿರಿಜಾ ಕಲ್ಯಾಣ” (Girija Kalyana) ಮಹೋತ್ಸವವನ್ನು ಜನವರಿ 15 ಗುರುವಾರದಂದು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಆಯೋಜಿಸಲಾಗಿದೆ.
ಜನವರಿ 12 ರಿಂದ ಜನವರಿ 20 ರವರೆಗೆ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿದ್ದು ಭಕ್ತಾದಿಗಳು ಉತ್ಸವದಲ್ಲಿ ಭಾಗವಹಿಸಲು ಶಿವಗಂಗೆ ಶ್ರೀ ಗಂಗಾಧರೇಶ್ವರಸ್ವಾಮಿ ಮತ್ತು ಹೊನ್ನಾದೇವಿ ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.