ಬೆಂಗಳೂರು; ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆಯು ಪ್ರಕಟಿಸಿದ್ದ ಅಬಕಾರಿ (Excise) ಸನ್ನದುಗಳ ಇ-ಹರಾಜು ಪ್ರಕ್ರಿಯೆಗಳನ್ನು ರಾಜ್ಯ ಉಚ್ಛ ನ್ಯಾಯಾಲಯದ ಧಾರವಾಡ ಪೀಠದ ನಿರ್ದೇಶನಗಳನುಸಾರ ಮುಂದೂಡಲಾಗಿದೆ.
ಧಾರವಾಡ ಹೈಕೋರ್ಟ್ ಪೀಠದಲ್ಲಿ ಡಿಸೆಂಬರ್ 26 ರಂದು ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ಸಂಖ್ಯೆ 110093/2025 ಆಧರಿಸಿ ಉಚ್ಚನ್ಯಾಯಾಲಯ ಈ ನಿರ್ದೇಶನ ನೀಡಿದೆ.
ಈಗಾಗಲೇ ಪ್ರಕಟಿಸಿದ್ದ ಅಧಿಸೂಚನೆಯಂತೆ ಎಂಎಸ್‌ಟಿಸಿ ಪೋರ್ಟಲ್ ಮೂಲಕ ಜನವರಿ 13 ರಿಂದ 20 ರವರೆಗೆ ನಡೆಯಬೇಕಾಗಿದ್ದ ಅಬಕಾರಿ ಸನ್ನದುಗಳ ನೇರ ಹರಾಜು(Live Bidding) ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ.
ಇ-ಹರಾಜು ಪ್ರಕ್ರಿಯೆ ನಡೆಯುವ ಮುಂದಿನ ದಿನಾಂಕಗಳನ್ನು ನಂತರ ತಿಳಿಸಲಾಗುವುದು ಎಂದು ಅಪರ ಅಬಕಾರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.