ದೊಡ್ಡಬಳ್ಳಾಪುರ: ಗುಜರಾತ್ ಆಯೋಜಿಸಲಾಗಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ (Kite competition) ದೊಡ್ಡಬಳ್ಳಾಪುರದ ಗಾಳಿಪಟ ಕಲಾ ಸಂಘದ ಸದಸ್ಯರು ಭಾಗವಹಿಸಿದ್ದಾರೆ.
ಅಹಮದಾಬಾದ್‌ನ ಸಾಬರಮತಿ ನದಿ ತೀರದಲ್ಲಿ ಜನವರಿ 12 ರಿಂದ 15ರ ವರೆಗೆ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ.
ಈ ಉತ್ಸವದಲ್ಲಿ ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ಕೆ.ಎಸ್.ಪ್ರಸನ್ನ, ಬಿ.ಪಿ.ಭಾಸ್ಕರ್, ಬಿ.ಪಿ. ಪ್ರಸನ್ನ ಕುಮಾರ್ ಭಾಗವಹಿಸಿದ್ದಾರೆ.