ದೆಹಲಿ: ಬೀದಿ ನಾಯಿಗಳ ಕಡಿತದಿಂದ (Dog Bites) ಜನರಿಗೆ ಗಾಯ ಅಥವಾ ಸಾವು ಸಂಭವಿಸಿದರೆ ರಾಜ್ಯ ಸರಕಾರ ಭಾರಿ ಪರಿಹಾರ ನೀಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ.
ಪ್ರತಿ ನಾಯಿ ಕಡಿತದಿಂದ ಮಕ್ಕಳು, ವೃದ್ಧರಿಗೆ ಉಂಟಾಗುವ ಗಾಯ ಅಥವಾ ಸಾವು ಸಂಭವಿಸಿದರೆ, ರಾಜ್ಯವಾರು ಭಾರಿ ಪರಿಹಾರ ನಿಗದಿಪಡಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.
ನಾಯಿಗಳಿಗೆ ಆಹಾರ ನೀಡುತ್ತಿದ್ದೇವೆ ಎಂದು ಹೇಳುವವರು ಅವುಗಳನ್ನು ನಿಮ್ಮ ಮನೆಗೆ ಕರೆದೊಯ್ದಿರಿ. ನಾಯಿಗಳು ಏಕೆ ಕಚ್ಚಬೇಕು, ಜನರನ್ನು ಏಕೆ ಹೆದರಿಸಬೇಕೆಂದು ನ್ಯಾಯಾಲಯ ಪ್ರಶ್ನಿಸಿದೆ ಎಂದು ವರದಿಯಾಗಿದೆ.