ದೊಡ್ಡಬಳ್ಳಾಪುರ: ಮಹಿಳೆಯೋರ್ವರ ಹತ್ಯೆ (Murder) ಆರೋಪಿ, ಸ್ವಗ್ರಾಮದ ಬಳಿ ನೇಣಿಗೆ ಶರಣಾಗಿರುವ (Suicide) ಘಟನೆ ತಾಲೂಕಿನ ಕೋಳೂರು ಬಳಿ ಮಂಗಳವಾರ ರಾತ್ರಿ ನಡೆದಿದೆ.
ಮೃತನನ್ನು ಕೋಳೂರು ಮೂಲದ ವೀರಭದ್ರಪ್ಪ (60 ವರ್ಷ) ಎಂದು ಗುರುತಿಸಲಾಗಿದೆ.
ಮೃತನು ಚಿಕ್ಕಬಾಣವಾರದಲ್ಲಿ ವಾಸವಿದ್ದು, ಸೋಮವಾರ ಹಣಕಾಸಿನ ವ್ಯವಹಾರದ ಹಿನ್ನೆಲೆ ದಾಕ್ಷಾಯಿಣಿ ಎನ್ನುವ ಮಹಿಳೆಯ ಕೊಂದು ಪರಾರಿಯಾಗಿದ್ದ ಎನ್ನಲಾಗಿದ್ದು, ಈ ಕುರಿತಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ ತಲೆ ಮರೆಸಿಕೊಂಡಿದ್ದ ವೀರಭದ್ರಪ್ಪ ಮಂಗಳವಾರ ರಾತ್ರಿ ಸ್ವಗ್ರಾಮ ಕೋಳೂರಿಗೆ ಬಂದು ಗ್ರಾಮದ ರಸ್ತೆ ಬದಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.