Makar Sankranti Celebrations: Sadhguru's Call for Farmers

ಮಕರ ಸಂಕ್ರಾಂತಿ ಸಂಭ್ರಮ: ರೈತರಿಗಾಗಿ ಸದ್ಗುರುಗಳ ಕರೆ

ಚಿಕ್ಕಬಳ್ಳಾಪುರ: ಮಕರ ಸಂಕ್ರಾಂತಿಯ (Makara Sankranti) ಸಂದರ್ಭದಲ್ಲಿ ಸದ್ಗುರುಗಳು ದೇಶದ ಆಹಾರದ ಸ್ಥಿತಿ, ಮಣ್ಣಿನ ಅವನತಿ, ನೀರಿನ ಕೊರತೆ ಮತ್ತು ರೈತರ ಸಂಕಷ್ಟದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿದಿನ ಕೇವಲ ಎರಡು ನಿಮಿಷಗಳನ್ನು ಮೀಸಲಿಡುವಂತೆ ಸದ್ಗುರುಗಳು ಮನವಿ ಮಾಡಿದ್ದಾರೆ.

ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ, ಸದ್ಗುರು ಸನ್ನಿಧಿ ಚಿಕ್ಕಬಳ್ಳಾಪುರದಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ನಿಗದಿಪಡಿಸಲಾಗಿರುವ ಲಿಂಗ ಭೈರವಿ, ನವಗ್ರಹ ದೇವಾಲಯಗಳು ಮತ್ತು ತೀರ್ಥಕುಂಡಗಳ ಪ್ರತಿಷ್ಠಾಪನೆಯೊಂದಿಗೆ ಕರ್ನಾಟಕಕ್ಕೆ ಒಂದು ಮಹತ್ತರವಾದ ಆಧ್ಯಾತ್ಮಿಕ ಉಡುಗೊರೆಯನ್ನು ಸದ್ಗುರುಗಳು ಘೋಷಿಸಿದರು.

ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರವರೆಗೆ 5 ದಿನಗಳ ತೀವ್ರತರ ಪ್ರತಿಷ್ಠಾಪನಾ ಪ್ರಕ್ರಿಯೆಯಾಗಿರುತ್ತದೆ ಎಂದು ಸದ್ಗುರುಗಳು ಹಂಚಿಕೊಂಡರು.

ನಿನ್ನೆ ದಿನವಿಡೀ ನಡೆದ ಆಚರಣೆಗಳಲ್ಲಿ ನಾಗ, ಯೋಗೇಶ್ವರ ಲಿಂಗದ ಪ್ರತಿಷ್ಠಾಪಿತ ಸ್ಥಳಗಳಲ್ಲಿ ವಿಶೇಷ ಅರ್ಪಣೆಗಳು ಮತ್ತು ಪ್ರಕ್ರಿಯೆಗಳು ನಡೆದಿದ್ದು, ಜೊತೆಗೆ ಡೊಳ್ಳು ಕುಣಿತ ಸೇರಿದಂತೆ ಸ್ಥಳೀಯ ಜನಪದ ಕಲಾವಿದರಿಂದ ಮನಮೋಹಕ ಸಾಂಸ್ಕೃತಿಕ ಪ್ರದರ್ಶನಗಳನ್ನು ಒಳಗೊಂಡಂತೆ ಸೌಂಡ್ಸ್ ಆಫ್ ಈಶ ತಂಡದ ಸಂಗೀತ ಮತ್ತು ಈಶ ಸಂಸ್ಕೃತಿಯ ಭಕ್ತಿ ನೃತ್ಯ ಹಾಗೂ ಪ್ರಾಚೀನ ಸಮರ ಕಲೆ ಕಲರಿಪಯಟ್ಟು ಪ್ರದರ್ಶನಗಳು ಕೂಡ ನಡೆದವು.

ನಂತರ, ಕಾರ್ಯಕ್ರಮದಲ್ಲಿ ಬ್ರಹ್ಮಚಾರಿಗಳು ಆದಿಯೋಗಿಗೆ ಭವ್ಯ ಆರತಿಯನ್ನು ಅರ್ಪಿಸಿದರು. ಅದರ ಬಳಿಕ, ವಿಶೇಷವಾಗಿ ವಿನ್ಯಾಸಗೊಳಿಸಿದ ಬೆಳಕು, ಧ್ವನಿ ಮತ್ತು ಪ್ರೊಜೆಕ್ಷನ್‌ಗಳ ಮೂಲಕ ಆದಿಯೋಗಿಯ ಕಥೆ ಮತ್ತು ಯೋಗ ವಿಜ್ಞಾನವನ್ನು ಅದ್ಭುತ ದೃಶ್ಯ ಮಾಧ್ಯಮದಲ್ಲಿ ವರ್ಣಿಸುವ ಆದಿಯೋಗಿ ದಿವ್ಯ ದರ್ಶನವು ಎಲ್ಲ ವಯೋಮಾನದವರನ್ನು ಮನಸೂರೆಗೊಳಿಸಿತು.

ಹಬ್ಬದ ಮಹತ್ವದ ಬಗ್ಗೆ ಗಹನವಾದ ಒಳನೋಟಗಳನ್ನು ಹಂಚಿಕೊಂಡ ಸದ್ಗುರುಗಳು, “ಮಕರ ಸಂಕ್ರಾಂತಿ ಒಂದು ಕಲ್ಪಿತ ಹಬ್ಬವಲ್ಲ, ಇದು ನಂಬಿಕೆಯ ಕಟ್ಟುಪಾಡಿನ ಬಗ್ಗೆಯೂ ಅಲ್ಲ. ಇದು ಜೀವನದ ಒಂದು ಅತ್ಯಂತ ಸೂಕ್ಷ್ಮ ಅವಲೋಕನ.. ಇದು ವಸಂತ ಋತುವಿನ ಆರಂಭ, ಜೀವನವು ಅನೇಕ ವಿಭಿನ್ನ ರೀತಿಯಲ್ಲಿ ವಿಕಾಸಗೊಳ್ಳುತ್ತದೆ ಮತ್ತು ಇದು ಸುಗ್ಗಿಯ ಹಬ್ಬವೂ ಹೌದು, ಕೃಷಿಗೆ ಮಾತ್ರವಲ್ಲದೆ ಆಧ್ಯಾತ್ಮಿಕ ಅನ್ವೇಷಕರಿಗೂ ಇದು ಸುಗ್ಗಿಯ ಸಮಯವೆಂದು ಪರಿಗಣಿಸಲಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ, ಈ ದಿನದಂದು ನಮ್ಮ ಸುತ್ತಲಿನ ಜೀವನದೊಂದಿಗಿನ ನಮ್ಮ ಸಂಬಂಧವನ್ನು ಆಚರಿಸಲಾಗುತ್ತದೆ” ಎಂದು ಹೇಳಿದರು.

ಈ ಭೂಮಿಯ ಮೇಲಿನ ಜೀವನ ಯಾರೊಬ್ಬರಿಗೂ ಮಾತ್ರ ಸೀಮಿತವಲ್ಲ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಾವು ಉಸಿರಾಡುವಾಗ ನಾವು ಒಳಗೆಳೆಯುವ ಗಾಳಿಯನ್ನು ಮರ ಹೊರಬಿಡುತ್ತದೆ, ಮತ್ತು ನಾವು ಹೊರಬಿಡುವ ಗಾಳಿಯನ್ನು ಮರ ಒಳಗೆಳೆಯುತ್ತದೆ.

ನಮ್ಮ ಜೀವನವು ಒಂದು ದೊಡ್ಡ ವಿದ್ಯಮಾನವಾಗಿದೆ, ನಾವು ಅದರ ಒಂದು ಚಿಕ್ಕ ಭಾಗವಷ್ಟೇ. ನಾವು ಪ್ರತ್ಯೇಕ ಪ್ರಕ್ರಿಯೆಯಲ್ಲ. ಆದ್ದರಿಂದ, ಮಕರ ಸಂಕ್ರಾಂತಿ ಎಂಬುದು ಒಳಗೂಡಿಸಿಕೊಳ್ಳುವಿಕೆಯ ಪ್ರಕ್ರಿಯೆಯಾಗಿದ್ದು, ಆ ದಿಕ್ಕಿನಲ್ಲಿ ನೀಡುವ ಬಲವಾದ ಸಂದೇಶವಾಗಿದೆ ಎಂದು ಮುಂದುವರಿಸುತ್ತಾ ಹೇಳಿದರು.

ದಿನದ ಆರಂಭದಲ್ಲಿ, ಸದ್ಗುರುಗಳು ಮತ್ತು ಅವರು ಸದ್ಗುರು ಸನ್ನಿಧಿಗೆ ಆಗಮಿಸುವ ಸಂದರ್ಶಕರ ಸುರಕ್ಷತೆಗಾಗಿ ಹೊಸ ಚಿಕ್ಕಬಳ್ಳಾಪುರ ಪೊಲೀಸ್ ಚೆಕ್ ಪೋಸ್ಟ್ ಅನ್ನು ಉದ್ಘಾಟಿಸಿದರು.

ಸದ್ಗುರು ಸನ್ನಿಧಿಯಲ್ಲಿ ನಡೆದ ಐದು ದಿನಗಳ ಸಾಂಪ್ರದಾಯಿಕ ಜಾತ್ರೆಯ ಭಾಗವಾಗಿ, ಅವರೆಕಾಯಿ ಹಬ್ಬವು ದಕ್ಷಿಣ ಕರ್ನಾಟಕದ ಅವರೆಕಾಳಿನ ವೈಭವವನ್ನು ಮರುಕಳಿಸುವಂತೆ ಮಾಡಿತು.

ಈ ಪ್ರದೇಶದಲ್ಲಿ ಮಾತ್ರ ಲಭ್ಯವಿರುವ ಈ ವಿಶೇಷ ಕಾಳುಗಳ ಬಗ್ಗೆ ಮಾತನಾಡಿದ ಸದ್ಗುರುಗಳು, “ಇವು ಹೆಚ್ಚಾಗಿ ದಕ್ಷಿಣ ಕರ್ನಾಟಕದಲ್ಲಿ ಮಾತ್ರ ಲಭ್ಯವಿರುವ ವಿಶೇಷವಾದ ಕಾಳುಗಳು. ಆದ್ದರಿಂದ ಈ ಋತುವಿನಲ್ಲಿ, ಎಲ್ಲವನ್ನೂ ಈ ಕಾಳುಗಳಿಂದಲೇ ತಯಾರಿಸಲಾಗುತ್ತದೆ” ಎಂದು ಹೇಳಿದರು.

ಹಬ್ಬವು ಅವರೆಬೇಳೆ ಟ್ವಿಸ್ಟರ್‌ಗಳು ಮತ್ತು ಅವರೆಬೇಳೆ ಹೋಳಿಗೆಯಿಂದ ಹಿಡಿದು ಅವರೆಬೇಳೆ ಪಾವ್ ಭಾಜಿ ಮತ್ತು ಅದಕ್ಕೂ ಮೀರಿದ ಈ ಸಾಂಪ್ರದಾಯಿಕ ಅವರೆಕಾಳುಗಳಿಂದ ತಯಾರಿಸಿದ ಸಾಂಪ್ರದಾಯಿಕ ಖಾದ್ಯಗಳ ಶ್ರೇಣಿಯೊಂದಿಗೆ ಸ್ಥಳೀಯ ಪಾಕವೈವಿಧ್ಯತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರದರ್ಶಿಸಿತು.

ಸಂದರ್ಶಕರು ಗ್ರಾಮೀಣ ಕರ್ನಾಟಕದ ಆಹಾರ ಸಂಪ್ರದಾಯಗಳ ಜೀವಂತ ಚಿತ್ರಣವನ್ನು ಅನುಭವಿಸಿದರು ಮತ್ತು ಭೂಮಿ, ಸುಗ್ಗಿ ಹಾಗೂ ಸನ್ನಿಧಿಯಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ಆಚರಣೆಗಳೊಂದಿಗಿನ ಅವರ ಸಂಪರ್ಕವೂ ಆಳವಾಗಿ ಬಲಗೊಂಡಿತು.
ಭಾರತದ ಬೆನ್ನೆಲುಬಾಗಿರುವ ಕೃಷಿಗೆ ಬೆಂಬಲ ನೀಡುವ ಅಗತ್ಯವಿದೆ ಎಂಬುದನ್ನು ಅವರು ಈ ಮೂಲಕ ವಿಶೇಷವಾಗಿ ಒತ್ತಿ ಹೇಳಿದರು.

ರೈತರಿಗಾಗಿ ಕರೆ

“ನೀವು ಎಲ್ಲರೂ ಪ್ರಜ್ಞೆಯಿಂದ ಕೂಡಿದ್ದರೆ… ಪ್ರತಿದಿನ ಕೇವಲ ಎರಡು ನಿಮಿಷ… ಈ ದೇಶದ ಮಣ್ಣು, ಈ ದೇಶದ ನೀರು, ಈ ದೇಶದ ಆಹಾರದ ಸ್ಥಿತಿ ಮತ್ತು ರೈತರ ಸಂಕಷ್ಟಗಳ ಬಗ್ಗೆ ಪ್ರತಿದಿನ ನಿಮ್ಮ ಫೋನ್‌ನಲ್ಲಿ ಸ್ವಲ್ಪ ಸಂಶೋಧನೆ ಮಾಡಿ ಏನನ್ನಾದರೂ ಹೇಳಿ.” ಎಂದು ಸದ್ಗುರುಗಳು ಹೇಳಿದರು.

“ಸ್ಥಳೀಯ ರೈತರಿಗೆ ಬೆಂಬಲ ನೀಡುವುದು ಅತ್ಯಂತ ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ, ಕೃಷಿಯನ್ನು ಲಾಭದಾಯಕ ಪ್ರಕ್ರಿಯೆಯನ್ನಾಗಿ ಮಾಡಬೇಕು.”

ಮುಂಜಾನೆಯಿಂದಲೇ, ಭಕ್ತರು ತಮ್ಮ ಭಕ್ತಿಯನ್ನು ಆಳವಾದ ಅನುಭವಾತ್ಮಕ ರೀತಿಯಲ್ಲಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟ ವಿವಿಧ ಅರ್ಪಣೆಗಳಲ್ಲಿ ಭಾಗವಹಿಸಿದರು.

ಸಂಜೆ, ಯೋಗೇಶ್ವರ ಲಿಂಗದಲ್ಲಿ ಸದ್ಗುರುಗಳ ಸಮ್ಮುಖದಲ್ಲಿ ವಿಶೇಷ ಪ್ರಕ್ರಿಯೆಯು, ಸೌರ ಚಕ್ರದ ಈ ಬದಲಾವಣೆಯ ಕಾಲದಲ್ಲಿ ಭಾಗವಹಿಸುವವರನ್ನು ನಿಶ್ಚಲತೆ ಮತ್ತು ಆಂತರಿಕ ಸಮತೋಲನವನ್ನು ಅನುಭವಿಸಲು ಆಹ್ವಾನಿಸಿತು.

ರಾಜಕೀಯ

ರೈತನಿಗೆ ಜಾತಿ ನಿಂದನೆ ಆರೋಪ; ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ಎಫ್‌ಐಆರ್

ರೈತನಿಗೆ ಜಾತಿ ನಿಂದನೆ ಆರೋಪ; ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ಎಫ್‌ಐಆರ್

ಕೆರೆಯ ಮಣ್ಣು ಸಾಗಾಟ ಸಂಬಂಧ ರೈತರೊಬ್ಬರಿಗೆ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ (BJP MLA ) ಬಿ.ಪಿ.ಹರೀಶ್ (B.P. Harish) ವಿರುದ್ಧ ದಾವಣಗೆರೆಯ ಡಿಸಿಆರ್‌ಇ ಪೊಲೀಸ್ ಠಾಣೆಯಲ್ಲಿ

[ccc_my_favorite_select_button post_id="118506"]
ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ (State Government Employees Association) 2026ನೇ ವರ್ಷದ ಕ್ಯಾಲೆಂಡರ್ (Calendar) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಬಿಡುಗಡೆ ಮಾಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.‌

[ccc_my_favorite_select_button post_id="117770"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ (Athletes) 2025-26ನೇ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ (Applications invited).

[ccc_my_favorite_select_button post_id="118180"]
ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು..!

ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು..!

ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಗಾಳಿಪಟ ಹಾರಿಸುವ ಮಾಂಜಾ ದಾರ (Maanja thread) ಕುತ್ತಿಗೆ ಸೀಳಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ನಡೆದಿದೆ.

[ccc_my_favorite_select_button post_id="118471"]
ದೊಡ್ಡಬಳ್ಳಾಪುರ: 2 ಪ್ರತ್ಯೇಕ ಕಾರು ಅಪಘಾತ.. ಗಾಯಾಳುಗಳು ಆಸ್ಪತ್ರೆಗೆ

ದೊಡ್ಡಬಳ್ಳಾಪುರ: 2 ಪ್ರತ್ಯೇಕ ಕಾರು ಅಪಘಾತ.. ಗಾಯಾಳುಗಳು ಆಸ್ಪತ್ರೆಗೆ

ಇಂದು ಸಂಭವಿಸಿದ ಎರಡು ಪ್ರತ್ಯೇಕ ಕಾರುಗಳ ಅಪಘಾತದಲ್ಲಿ (Accident) ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.

[ccc_my_favorite_select_button post_id="118357"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!