ದೊಡ್ಡಬಳ್ಳಾಪುರ: ತಾಲೂಕಿಗೆ ಹೊಂದಿಕೊಂಡಿರುವ ಮಾರಸಂದ್ರದ ಪ್ರತಿಷ್ಠಿತ ಸುಮನ್ ಪಿಯು ಕಾಲೇಜಿನಲ್ಲಿ (Suman PU College) ಮಕರ ಸಂಕ್ರಾಂತಿ (Makara Sankranti) ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಂಕ್ರಾಂತಿ ಹಬ್ಬದ ಅಂಗವಾಗಿ ಕಾಲೇಜಿನ ಆವರಣದಲ್ಲಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ತಮ್ಮ ಸೃಜನಶೀಲತೆ, ಕಲಾತ್ಮಕತೆ ಮತ್ತು ಸಂಸ್ಕೃತಿಯ ಅರಿವನ್ನು ಸುಂದರವಾಗಿ ಪ್ರದರ್ಶಿಸಿದರು.

ಬಣ್ಣ ಬಣ್ಣದ ರಂಗೋಲಿಗಳು ಕ್ಯಾಂಪಸ್‌ಗೆ ವಿಶೇಷ ಕಳೆ ಮತ್ತು ಹಬ್ಬದ ವಾತಾವರಣವನ್ನು ಸೃಷ್ಟಿಸಿತು.
ಈ ವೇಳೆ ಮಾತನಾಡಿದ ಕಾಲೇಜಿನ ಮುಖ್ಯಸ್ಥರು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ತಿಳಿಸುವಲ್ಲಿ, ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆಯನ್ನು ಉತ್ತೇಜಿಸುವಲ್ಲಿ, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ನಡುವಿನ ಆತ್ಮೀಯತೆಯನ್ನು ಹೆಚ್ಚಿಸಲು ಈ ರೀತಿಯ ಹಬ್ಬಗಳ ಆಚರಣೆ ಸಹಕಾರಿಯಾಗುತ್ತವೆ ಎಂದರು.

ಉತ್ತಮ ರಂಗೋಲಿ ಬಿಡಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸುಮನ್ ಪಿಯು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
