ದೊಡ್ಡಬಳ್ಳಾಪುರ: ಕನ್ನಡ ಸಾಹಿತ್ಯ ಪರಿಷತ್ತು, ಸಾಸಲು ಹೋಬಳಿ ಘಟಕದವತಿಯಿಂದ ಸಾಧ್ವಿಮಣಿ ಸಾಸಲು ಚಿನ್ನಮ್ಮ (Sasalu Chinnamma) ಉತ್ಸವ ಪೂರ್ವಸಿದ್ದತಾ ಸಭೆಯನ್ನು ನಾಳೆ (ಜ.18) ರಂದು ಕರೆಯಲಾಗಿದೆ.
ಉತ್ಸವ ನಡೆಸುವ ಬಗ್ಗೆ ಚರ್ಚಿಸಲು ಪೂರ್ವ ಸಿದ್ದತಾ ಸಭೆಯನ್ನು ಸಾಸಲು ಚಿನ್ನಮ್ಮ ಕೆರೆಯ ಆವರಣದಲ್ಲಿ ಜ.18 ರ ಬೆಳಗ್ಗೆ ಕರೆಯಲಾಗಿದೆ.
ಸಾಸಲು ಚಿನ್ನಮ್ಮ ಉತ್ಸವ ಕಾರ್ಯಕ್ರಮದ ಬಗ್ಗೆ ತಮ್ಮ ಸಲಹೆ ಮತ್ತು ಸಹಕಾರ ಕುರಿತು ಅಭಿಪ್ರಾಯವನ್ನು ತಿಳಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ. (ಸಾಮಾಜಿಕ ಜಾಲತಾಣದ ಸಾಂದರ್ಭಿಕ ಚಿತ್ರ ಬಳಸಲಾಗಿದೆ)