ಬೆಂಗಳೂರು: ತೀವ್ರ ಕುತೂಹಲ, ಚರ್ಚೆಗೆ ಕಾರಣವಾಗಿದ್ದ ಬಿಗ್‌ಬಾಸ್ ಕನ್ನಡ (Bigg Boss Kannada) ಸೀಸನ್ 12ರ ವಿಜೇತರು ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ದೊರೆತಿದ್ದು, ಈ ಬಾರಿಯ ಬಿಗ್‌ಬಾಸ್ 12ರ ವಿಜೇತರ ಹೆಸರನ್ನು ನಿರೂಪಕ ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ಘೋಷಿಸಿದ್ದಾರೆ.
Gilli winning moment🥹🥹❤️❤️#BBK12 #Gilli pic.twitter.com/bH2RXobD6Y
— Manu (@yoitzmanu) January 18, 2026
ನಿರೀಕ್ಷಿಸಿದಂತೆ ಬರೋಬ್ಬರಿ 37 ಕೋಟಿಗೂ ಅಧಿಕ ವೋಟ್‌ಗಳನ್ನು ಪಡೆಯುವ ಮೂಲಕ ಗಿಲ್ಲಿ ನಟ ಅವರು ಈ ಬಾರಿಯ ಬಿಗ್‌ಬಾಸ್ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಇನ್ನೂ ವಂಶದ ಕುಡಿ ರಕ್ಷಿತಾ ಶೆಟ್ಟಿ ಅವರು ರನ್ನರ್ ಅಪ್ ಆಗಿದ್ದಾರೆ.
ಈ ಬಾರಿ ಟಾಪ್ 5 ಸ್ಥಾನದಲ್ಲಿ ಕಾವ್ಯ, ರಘು, ಅಶ್ವಿನಿ ಗೌಡ, ಗಿಲ್ಲಿ ನಟ ಹಾಗೂ ರಕ್ಷಿತಾ ಇದ್ದರು. ಈ ಟಾಪ್ 5 ಫೈನಲಿಸ್ಟ್ ಗಳ ಪೈಕಿ ಗಿಲ್ಲಿ ನಟ ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.
ಅಂತಿಮವಾಗಿ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಇಬ್ಬರ ಮಧ್ಯೆ ಪೈಪೋಟಿ ಜೋರಾಗಿತ್ತು.
Congratulations #Gilli ❤️
— Pranooth Gowda (@pranooth_mp) January 18, 2026
Well deserved winner 🔥
All the best for you future #GilliNata 🥳
ಕನ್ನಡದ ಪ್ರದೀಪ್ ರಂಗನಾಥನ್ ಆಗು ಗಿಲ್ಲಿ 😎#BBK12 #BBKSeason12 #KicchaSudeep pic.twitter.com/Q4wKc9UcsV pic.twitter.com/u3qHKObP29
ಕೊನೆಗೂ ಗಿಲ್ಲಿ ನಟ ಬಿಗ್‌ಬಾಸ್ ಗೆದ್ದು ಬೀಗಿದ್ದಾರೆ. ಇನ್ನು, ಗಿಲ್ಲಿ ನಟ ಅವರು ಟ್ರೋಫಿಯೊಂದಿಗೆ ₹50 ಲಕ್ಷ ಹಾಗೂ ಮಾರುತಿ ಸುಜುಕಿ ಎಸ್‌ಯುವಿ ವಿಕ್ಟೋರಿಯಸ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.
ತಮ್ಮ ಕಾಮಿಡಿ ಮೂಲಕವೇ ವೀಕ್ಷಕರ ಮನಸ್ಸನ್ನು ಗೆದ್ದುಕೊಂಡಿದ್ದರು. ಇದೀಗ ಕೊನೆಯದಾಗಿ ಬಿಗ್‌ಬಾಸ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪೋಟೋ, ವಿಡಿಯೋ: ಸಾಮಾಜಿಕ ಜಾಲತಾಣ