ದೊಡ್ಡಬಳ್ಳಾಪುರ: ತೆಂಗುನಾರು ಮಂಡಳಿ ರಾಜ್ಯಾಧ್ಯಕ್ಷ ಗಂಟಿಗಾನಹಳ್ಳಿ ವೆಂಕಟೇಶ್ ಬಾಬು (Gantiganahalli Venkatesh Babu) ಅವರ ಅಜ್ಜಿ ಶಾಂತಮ್ಮ (Shantamma) ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ವಯೋಸಹಜ ಅನಾರೋಗ್ಯದಿಂದ ಬಳಸಲುತ್ತಿದ್ದ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆಂದು ತಿಳಿದುಬಂದಿದೆ.
ಮೃತರು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದು, ಅಂತ್ಯ ಕ್ರಿಯೆ ಇಂದು ಮಧ್ಯಾಹ್ನ 1.30ಕ್ಕೆ ಗಂಟಿಗಾನಹಳ್ಳಿ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.