ದೊಡ್ಡಬಳ್ಳಾಪುರ: ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ದೊಡ್ಡಬಳ್ಳಾಪುರ ತಾಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ವತಿಯಿಂದ ಸಂಕ್ರಾಂತಿ ಅಂಗವಾಗಿ ನಡೆದ ಛಾಯಾ ಸಂಕ್ರಾಂತಿ ಸಂಭ್ರಮ-2026 (Chhaya Sankranti Celebration-2026) ಕಾರ್ಯಕ್ರಮ ಸಂಭ್ರಮದಿಂದ ನೆರವೇರಿದೆ.
ಕಾರ್ಯಕ್ರಮದ ಅಂಗವಾಗಿ 5 ವರ್ಷದಿಂದ 14 ವರ್ಷದೊಳಗಿನ ಮಕ್ಕಳು ವಿವೇಕಾನಂದ, ಬಸವಣ್ಣ, ವೆಂಕಟೇಶ್ವರ, ಕೊರವಂಜಿ, ಭಾರತ ನಾರಿ, ಹಳ್ಳಿ ಸೊಗಡಿನ ಧಿರಿಸು ಮೊದಲಾಗಿ ಐತಿಹಾಸಿಕ, ಪುರಾಣದ ಪಾತ್ರಗಳ ವಿವಿಧ ಛದ್ಮವೇಷಗಳೊಂದಿಗೆ ಆಧುನಿಕ ಧಿರಿಸುಗಳನ್ನು ಉಟ್ಟು ರ್ಯಾಂಪ್ ಮೇಲೆ ಬೆಕ್ಕಿನ ನಡುಗೆಯೊಂದಿಗೆ ಫ್ಯಾಷನ್ ಶೋ ನಡೆಸಿ, ನೆರೆದಿದ್ದ ಸಭಿಕರಿಗೆ ಮುದ ನೀಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಚ್.ಎಸ್.ನಾಗೇಶ್ ಮಕ್ಕಳಲ್ಲಿ ಅಡಗಿರುವ ಸೃಜನಶೀಲ ಪ್ರತಿಭೆಯನ್ನು ಹೊರತರಲು ಇಂತಹ ವೇದಿಕೆಗಳ ಅಗತ್ಯವಿದ್ದು, ಛಾಯಾಗ್ರಾಹಕರ ಸಂಘದ ಈ ಕಾರ್ಯಕ್ರಮ ಅಭಿನಂದನೀಯ ಎಂದರು.
ಫ್ಯಾಶನ್ ಶೋನಲ್ಲಿ ಮಕ್ಕಳಾದ ಪೂರ್ವಿಕ (ಪ್ರಥಮ), ಯಶಾ ಯಾದವ್ (ದ್ವಿತೀಯ), ಜೆಸ್ವಿಕ (ತೃತೀಯ) ಬಹುಮಾನಗಳನ್ನು ಗಳಿಸಿದರು.
ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ನಡೆದ ರಂಗೋಲಿ ಸ್ಪರ್ಧೆ ಸಂಜು ಶ್ರೀ (ಪ್ರಥಮ), ಸ್ಮಿತ (ದ್ವಿತೀಯ), ಗಂಗಾ (ತೃತೀಯ) ಬಹುಮಾನಗಳನ್ನು ಗಳಿಸಿದರು.
ವಿಜೇತರಿಗೆ ನಗದು ಬಹುಮಾನ, ವಿಶೇಷ ಕೊಡುಗೆ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಶಂಸಾ ಪತ್ರವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಎಚ್.ಎಸ್.ಶಿವಶಂಕರ್, ವಿ.ಎಸ್.ರವಿಕುಮಾರ್, ಹಿರಿಯ ಛಾಯಾಗ್ರಾಹಕ ಸುರೇಶ್ ಬಾಬು, ಕಿರಣ್ ಕರ್ನಾಟಕ ಛಾಯಾಗ್ರಾಹಕರ ಸಂಘದ ನಿರ್ದೇಶಕ ರವಿಕುಮಾರ್, ದೊಡ್ಡಬಳ್ಳಾಪುರ ತಾಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಚ್.ಆರ್.ಮೋಹನ್, ಗೌರವ ಅಧ್ಯಕ್ಷ ಕೆ.ಸಂಪತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಾರುತಿ, ಉಪಾಧ್ಯಕ್ಷರಾದ ಗೋಪಾಲ್ ಮುನಿರಾಜು, ಖಜಾಂಚಿ ರಾಜಪ್ಪಿ, ಕಾರ್ಯಾಧ್ಯಕ್ಷ ಅರುಣ್ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ರಾಜೇಶ್, ಬೃಂದಾವನಿ, ಸಂಚಾಲಕ ಹರೀಶ್ ಬಾಬು ಸಂಘದ ನಿರ್ದೇಶಕರು ಹಾಜರಿದ್ದರು.