ಕಲಬುರಗಿ: ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ನಗರದ ಸಿದ್ದೇಶ್ವರ ಕಾಲೋನಿ ಯಲ್ಲಿ ನಡೆದಿದೆ.
ಮೃತಳನ್ನು ಅನುಸೂಯ ಅವಿನಾಶ್ ಆಕಡೆ (26 ವರ್ಷ) ಎಂದು ಗುರುತಿಸಲಾಗಿದೆ.
ಮೃಯ ಅನುಸೂಯ ತನ್ನ ಅತ್ತೆ ಮಗ ಅವಿನಾಶ್ ಅವರನ್ನು ಪ್ರೀತಿಸಿ, ಎರಡು ತಿಂಗಳ ಹಿಂದೆ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಮದುವೆಯ ನಂತರ ಗಂಡ ನೊಂದಿಗೆ ಹಳ್ಳಿಯಲ್ಲಿ ವಾಸಿಸುವುದಕ್ಕೆ ಅನುಸೂಯ ಮನಸ್ಸು ಮಾಡಿಕೊಳ್ಳಲಾಗದೆ ಮಾನಸಿಕವಾಗಿ ನೊಂದಿದ್ದಳು ಎನ್ನಲಾಗಿದೆ.
ಆಕೆಯ ಮೂವರು ಸಹೋದರಿಯರು ಗಂಡಂದಿರ ಜತೆ ಬೆಂಗಳೂರು ಮುಂಬೈನಲ್ಲಿ ವಾಸವಾಗಿದ್ದರೆ, ತಾನು ಚಿಕ್ಕ ಹಳ್ಳಿಯಲ್ಲಿ ಜೀವನ ನಡೆಸಬೇಕಾಗಿರುವುದರಿಂದ ಬೇಸರ ಗೊಂಡಿದ್ದಳು ಎಂದು ವರದಿಯಾಗಿದೆ.
ಕರಡಿ ದಾಳಿ
ಶಿಕಾರಿಪುರ: ಕರಡಿ ದಾಳಿಯಿಂದಾಗಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನಡೆದಿದೆ.
ಹಾರೋಗೊಪ್ಪ ಗ್ರಾಮದ ಸೋಮ್ಲಾನಾಯ್ಕ ಕರಡಿ ದಾಳಿಯಿಂದ ಗಾಯ ಗೊಳಗಾಗಿದ್ದು, ತಮ್ಮ ಜಮೀನಿನಲ್ಲಿ ಬೆಳಗ್ಗೆ ಪಂಪ್‌ಸೆಟ್ ಮೋಟರ್ ಸ್ವಿಚ್ ಹಾಕಲು ಹೋದಾಗ ಹಿಂದಿ ನಿಂದ ಕರಡಿ ದಿಢೀರ್ ದಾಳಿ ನಡೆಸಿದೆ.
ಕುತ್ತಿಗೆ, ಬೆನ್ನು, ಹೊಟ್ಟೆಯ ಭಾಗ ದಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿವೆ.
ಶಿಕಾರಿಪುರ ಸಾರ್ವಜನಿಕ ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಡಿಆರ್ ಎಫ್‌ಓ ಹರೀಶ್ ಸಜ್ಜಪ್ಪ ಮಾಹಿತಿ ಪಡೆದಿದ್ದು, ಕರಡಿ ಸೆರೆಗೆ ಬೋನ್‌ಗಳನ್ನು ಅಳವಡಿಸಲಾಗಿದೆ.
ಗುಂಡಿಕ್ಕಿಕೊಂಡು ಫಾರ್ಮಾಸಿಸ್ಟ್ ಆತ್ಮಹತ್ಯೆ
ಅಂಕೋಲಾ: ತಾಲೂಕಿನ ಹಟ್ಟಿಕೇರಿಯಲ್ಲಿರುವ ತಮ್ಮ ನಿವಾಸದ ಬಳಿ ಫಾರ್ಮಾಸಿಸ್ಟ್ ರಾಜೀವ ಪಿಕಳೆ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಹಟ್ಟಿಕೇರಿಯ ತಮ್ಮ ನಿವಾಸದ ಎದುರು ತುಳಸಿಕಟ್ಟೆ ಬಳಿ ಡಬಲ್ ಬ್ಯಾರಲ್ ಗನ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರವಾರದ ಖಾಸಗಿ ಆಸ್ಪತ್ರೆಯಲ್ಲಿ ಫಾರ್ಮಾ ಸಿಸ್ಟ್ ಆಗಿರುವ ಅವರು ಕೆಲ ದಿನಗಳ ಹಿಂದೆ ಅವಧಿ ಮೀರಿದ ಮಾತ್ರೆ ನೀಡಿದ ಬಗ್ಗೆ ವಿಡಿಯೊ ವೈರಲ್ ಆಗಿತ್ತು. ಘಟನೆಗೆ ಇದೇ ಕಾರಣ ಎಂದು ವರದಿಯಾಗಿದೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.