ದೊಡ್ಡಬಳ್ಳಾಪುರ: ತಾಲೂಕಿನ ಹುಲುಕುಡಿಯಲ್ಲಿ (Hulukudi) ಶ್ರೀ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ಮಹಾ ರಥೋತ್ಸವವು ಇಂದು (ಜ.25) ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ನಿನ್ನೆ ಬೆಳಿಗ್ಗೆ 10ಕ್ಕೆ ಅಗ್ನಿ ಕುಂಡ ಪೂಜೆ, ಸಂಜೆ 5ಕ್ಕೆ ಕಳಸ ಪೂಜೆ, ಉಯ್ಯಾಲೋತ್ಸವ ನಡೆಯಲಿದೆ. ರಾತ್ರಿ 7ಕ್ಕೆ ವೀರಗಾಸೆ ಕುಣಿತದೊಂದಿಗೆ ಅಗ್ನಿಕುಂಡ ಹಾಯುವುದು. 8.15ಕ್ಕೆ ದೀಪಾರಾಧನೆ ನಡೆಸಲಾಯಿತು.
ಜ.25 ರಂದು ಬೆಳಿಗ್ಗೆ 10.30ಕ್ಕೆ ರಥಾಂಗ ಹೋಮ, 11ಕ್ಕೆ ವಿವಿಧ ಕಲಾತಂಡಗಳ ಪ್ರದರ್ಶನ 12 ಗಂಟೆಗೆ ಮಹಾ ರಥೋತ್ಸವ ನಡೆಯಲಿದೆ.
ಯಡಿಯೂರು ರಂಭಾಪುರಿ ಶಾಖಾ ಬಾಳೆಹೊನ್ನೂರು ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ಪ್ರಕಟಣೆ ತಿಳಿಸಿದೆ.