ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿಯ ಹನುಮಂತಪ್ಪ ಲೇಔಟ್ ಬಳಿ ಭಾರತ್ ಪೆಟ್ರೋಲ್ ಬಂಕ್ ಹಿಂಬಾಗದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷದ ಅಂಗವಾಗಿ ವಿರಾಟ್ ಹಿಂದೂ (Virat Hindu) ಸಮಾವೇಶ ಕಾರ್ಯಕ್ರಮವನ್ನ ವಿಜಯಪುರದ ಬಸವಕಲ್ಯಾಣ ಮಠದ ಮಹಾದೇವಸ್ವಾಮೀಜಿಗಳ ದಿವ್ಯಸಾನಿದ್ಯದಲ್ಲಿ ನೆರವೇರಿತು.
ಹಿಂದೂ ಸಾಮಾಜಿಕ ಕಾರ್ಯಕರ್ತರಾದ ಉಲ್ಲಾಸ್ ಟಿ ರವರು ಮಾತನಾಡಿ, ಹಿಂದೂಗಳು ಇತ್ತೀಚಿನ ಸಮಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಹಿಂದೂಗಳ ಕಾರ್ಯವೈಖರಿ, ಭವಿಷ್ಯದಲ್ಲಿ ದೇಶದ ಅಭಿವೃದ್ಧಿಯ ವಿಚಾರದಲ್ಲಿ ಹಿಂದೂಗಳ ಪಾತ್ರ, ಹಿಂದೂ ಸಮಾಜ ಕಟ್ಟುವ ವಿಚಾರಗಳ ಬಗ್ಗೆ ಮಾತನಾಡಿದರು.
ಬಸವ ಕಲ್ಯಾಣ ಮಠದ ಮಹಾದೇವ ಸ್ವಾಮಿಜೀಗಳು ಮಾತನಾಡಿ, ಹಿಂದೂಗಳು ಉತ್ತಮ ಕಾರ್ಯಗಳಿಗೆ ಒಗ್ಗೂಡುವುದು ಬಹಳ ಕಡಿಮೆ. ಬೇರೆ ಧರ್ಮಗಳಂತೇ ಹಿಂದೂಗಳು ಒಂದಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಳ್ಳಿ ರಥದಲ್ಲಿ ಭಾರತ ಮಾತೆಯ ಪೋಟೋವನ್ನ ಮೆರವಣಿಗೆ ಮಾಡಲಾಯಿತು.
ದೇಶಿಯ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗೋಪೂಜೆಗೆ ಅವಕಾಶ ನೀಡಲಾಗಿತ್ತು.