ದೊಡ್ಡಬಳ್ಳಾಪುರ: ತಾಲ್ಲೂಕಿನ ಮೂಲಕ ಹಾದು ಹೋಗಿರುವ ದಾಬಸ್ ಪೇಟೆ- ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ (National Highway) 648ರಲ್ಲಿನ ನಾಗಸಂದ್ರ ಅಂಡರ್ ಪಾಸ್ ಸಮೀಪ ಕಸದ ರಾಶಿಗೆ ದಾರಿ ಹೋಕರು ಬೆಂಕಿ ಹಚ್ಚಿದ್ದರಿಂದ ದಟ್ಟ ಹೊಗೆಯೊಂದಿಗೆ ಕಸದ ರಾಶಿ ಹೊತ್ತಿ ಉರಿಯಿತು.

ನಗರಕ್ಕೆ ಸಮೀಪದಲ್ಲೇ ಇರುವ ಈ ಅಂಡರ್ಪಾಸ್ ಬಳಿ ಕಸ ತಂದು ರಾಶಿ ಹಾಕುವವರ ಸಂಖ್ಯೆ ಮೀತಿ ಮೀರಿದೆ. ಹೆದ್ದಾರಿ ಬದಿಯಲ್ಲೇ ಇರುವುದರಿಂದ ರಸ್ತೆಯಲ್ಲಿ ಹೋಗುವ ವಾಹನಗಳು ಅಪಾಯಕ್ಕೆ ಸಿಲುಕುವ ಸಂಭವ ಹೆಚ್ಚಾಗಿದೆ.
ಹೆದ್ದಾರಿಯಲ್ಲಿ ಆಧುನಿಕ ಗುಣಮಟ್ಟದ ಸಿ.ಸಿ.ಟಿವಿ ಕ್ಯಾಮೆರಾಗಳು ಇರುವುದರಿಂದ ಟೋಲ್ ಸಂಗ್ರಹ ಮಾಡುವವರು ರಸ್ತೆ ಬದಿಯಲ್ಲಿ ಕಸ ತಂದು ಹಾಕುವವರನ್ನು ಪತ್ತೆ ಮಾಡುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.