ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಬಾರಾಮತಿ ಬಳಿ ಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಬುಧವಾರ ಬೆಳಿಗ್ಗೆ 8:45 ರ ಸುಮಾರಿಗೆ ಲಿಯರ್‌ಜೆಟ್ 45 ಅಪಘಾತಕ್ಕೀಡಾಗಿದ್ದು, ಪವಾರ್, ಅವರ ಇಬ್ಬರು ಸಹಾಯಕರು, ಪೈಲಟ್ ಮತ್ತು ಸಹ ಪೈಲಟ್ ಸಾವನ್ನಪ್ಪಿದ್ದಾರೆ.
The aircraft was a Learjet, a 6 to 8 seater.
— Akash Sharma (@kaidensharmaa) January 28, 2026
It took off from Mumbai at 8.10 am. ATC was alerted at 9.12 am.
Chances of survival appear low.
Official inputs on Deputy CM Ajit Pawar and crew awaited. pic.twitter.com/BqDEw7zzbb
66 ವರ್ಷದ ಪವಾರ್ ಸ್ಥಳೀಯ ಚುನಾವಣೆಗೆ ಮುಂಚಿತವಾಗಿ ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ಮುಂಬೈನಿಂದ ತೆರಳುತ್ತಿದ್ದರು.
ಅಜಿತ್ ಪವಾರ್ ಅವರು ಶೀಘ್ರದಲ್ಲೇ ರಾಜ್ಯ ಬಜೆಟ್ ಮಂಡಿಸಬೇಕಿತ್ತು.
ಪ್ರಧಾನಿ ಸಂತಾಪ
ಅಜಿತ್ ಪವಾರ್ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.