ದೊಡ್ಡಬಳ್ಳಾಪುರ; ಮನೆಯ ಬಳಿ ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು (Stray dog) ದಾಳಿ ಮಾಡಿ, ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಇಂದು ಬೆಳಗ್ಗೆ ನಗರದ ಪಾಲನಜೋಗಿಹಳ್ಳಿಯ ಪಾಂಡುರಂಗ ದೇವಾಲಯದ ಸಮೀಪ ನಡೆದಿದೆ.
ಮಂಜುನಾಥ್ ಮತ್ತು ಮಂಜುಳ ಅವರ ಪುತ್ರ ನಿಖಿತ್ ರಾಜ್ ಇಂದು (ಭಾನುವಾರ) ಮನೆಯ ಸಮೀಪ ಆಟ ಆಡುವ ವೇಳೆ ಸುಮಾರು 15 ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ಮಾಡಿ, ತೀವ್ರವಾಗಿ ಗಾಯಗೊಳಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ನಿಖಿತ್ ರಾಜ್ ಕೈ, ಕಾಲು ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಡಿಗೇಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಐದಾರು ಮಂದಿಯನ್ನು ಕಚ್ಚಿವೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)