ದೊಡ್ಡಬಳ್ಳಾಪುರ: ಇಂದು ಕೇಂದ್ರದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಅವರು ಮಂಡಿಸಿದ ಬಜೆಟ್ ಕುರಿತಂತೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ (Rajaghatta Ravi) ಅವರು ಪ್ರತಿಕ್ರಿಯೆ ನೀಡಿದ್ಸು, ಕೇಂದ್ರ ಸರ್ಕಾರ ಕರ್ನಾಟಕವನ್ನು ಮರೆತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, 2047 ರವರೆಗೂ ವಿದೇಶಿ ಕಂಪನಿಗಳಿಗೆ ಟ್ಯಾಕ್ಸ್ ಇಲ್ವಂತೆ, ಮೇಕ್ ಇನ್ ಇಂಡಿಯ ಉದ್ದಾರವಾಗೋದು ಹೇಗೆ..? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಯಾರು ಕೇಳಲ್ಲ ಅಂತ ಸರ್ಕಾರಗಳು ಯದ್ವಾ ತದ್ವಾ ಮದ್ಯದ ಬೆಲೆ ಏರಿಸುತ್ತಾ ಹೋದರೆ ಅದರ ಹೊಡೆತ ಬೀಳೋದು ರೈತರ ಮೇಲೆ. ಏಕೆಂದರೆ ಬಹುತೇಕ ದಿನಗೂಲಿಗಳು ಮದ್ಯಪಾನ ಮಾಡದೆ ಕೆಲಸ ಮಾಡಲ್ಲ, ಸಣ್ಣ ಪುಟ್ಟ ಕೆಲಸಗಳಿದ್ದರು ಅವರು ಕ್ವಾರ್ಟರ್ ರೇಟ್ ಮೇಲೆ ಕೂಲಿ ನಿಗದಿ ಮಾಡ್ತಾರೆ. ಕೂಲಿ ಕೆಲಸಕ್ಕೆ ಕೂಲಿ ಕೊಡೋಕೆ ರೈತರು ಪರದಾಡುತ್ತಾರೆ. ದರ ಏರಿಸೋ ಬದಲು ಮದ್ಯಪಾನ ನಿಷೇಧ ಮಾಡಬಹುದಲ್ವಾ? ಎಂದು ಪ್ರಶ್ನಿಸಿದ್ದಾರೆ
ಇನ್ನೂ ಕರ್ನಾಟಕದಿಂದ ತೆರಿಗೆ ಬರಿ ಔಟ್ ಗೋಯಿಂಗ್ ಮಾತ್ರ.. ಇನ್ ಕಮಿಂಗ್ ಕಟ್ಟಾಗಿ ಹೋಗಿದೆ.. ನಮ್ಮ ಯಾವುದೇ ಬೇಡಿಕೆಗಳು ಕೇಂದ್ರ ಸರ್ಕಾರದ ಕಿವಿಗೆ ಕೇಳಿಸಲೆ ಇಲ್ಲ ನಮ್ಮದು ಅರಣ್ಯ ರೋಧನವಾಗಿದೆ.
ಚಿನ್ನ ಬೆಳ್ಳಿ ಬೆಲೆ ಕೇಳಿದರೆ ಸಾಕು ಬಡವರು ಬಸವಳಿದು ಹೋಗ್ತಾರೆ ಅದರ ಬಗ್ಗೆ ಗಮನವೆ ಇಲ್ಲ, ಸಮಾನತೆ ಎಂದರೆ ಕರ್ನಾಟಕವನ್ನು ಹಿಂದುಳಿಯುವಂತೆ ಮಾಡಿ ಉತ್ತರ ಭಾರತದಂತೆ ಮಾಡುವ ಉದ್ದೇಶ ಇದ್ದಂತಿದೆ ಎಂದು ರಾಜಘಟ್ಟ ರವಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.