Astrology: ಮಂಗಳವಾರ, ಫೆಬ್ರವರಿ 03, 2026, ದೈನಂದಿನ ರಾಶಿ ಭವಿಷ್ಯ
ಮೇಷ ರಾಶಿ
ಇಂದು ಯಾವುದೇ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವಿಶೇಷವಾಗಿ ಪ್ರಮುಖ ಹಣಕಾಸಿನ ವ್ಯವಹಾರ ಗಳನ್ನು ಮಾತುಕತೆ ಮಾಡುವಾಗ ದುಡಿಕಿನ ನಿರ್ಧಾರಗಳನ್ನು ತೆಗೆದುಕೊ ಳ್ಳುವುದನ್ನು ತಪ್ಪಿಸಿ.ನಿಮ್ಮ ಉದಾರ ವರ್ತನೆಯ ಲಾಭವನ್ನು ನಿಮ್ಮ ಸ್ನೇಹಿತ ರು ಪಡೆಯಲು ಬಿಡಬೇಡಿ.
ವೃಷಭ ರಾಶಿ
ನಿಮ್ಮ ಮಗುವಿನಂತಹ ಸ್ವಭಾವ ಬೇರೆಯವರಿಗೆ ಅರ್ಥ ವಾಗು ವುದಿಲ್ಲ.ಜ್ಞಾನ ಮತ್ತು ಅನುಭವ ವನ್ನು ಇತರರೊಂದಿಗೆ ಹಂಚಿಕೊಂಡರೆ ನಿಮ್ಮ ಜ್ಞಾನ ಮತ್ತಷ್ಟು ವೃದ್ಧಿಯಾಗುತ್ತದೆ. ಕಷ್ಟಪಟ್ಟು ಮಾಡುವ ಕೆಲಸ ನಿಮ್ಮನ್ನು ಕೊನೆವರೆಗೂ ಕೈ ಹಿಡಿಯುತ್ತದೆ.
ಮಿಥುನ ರಾಶಿ
ಗಣ್ಯ ವ್ಯಕ್ತಿಗಳೊಂದಿಗೆ ಸಂವಹನ ನಡೆಸುವುದು ಉತ್ತಮ ಆಲೋಚನೆಗಳು ಮತ್ತು ಯೋಜನೆ ಗಳನ್ನು ತರುತ್ತದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಯನ್ನು ಅನುಸರಿಸಲು ಇಂದು ಉತ್ತಮ ದಿನವಾಗಿದೆ. ಆರ್ಥಿಕ ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರಿ.
ಕಟಕ ರಾಶಿ
ಈ ದಿನ ನಿಮಗೆ ಪ್ರಮುಖವಾಗಿರುತ್ತದೆ. ಜವಳಿ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದ್ದು, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಬಹುದು. ಉದ್ಯೋಗದಲ್ಲೂ ಯಶಸ್ಸು ಕಾಣುವಿರಿ.
ಸಿಂಹ ರಾಶಿ
ವ್ಯಾಪಾರಸ್ಥರಿಗೆ ಉತ್ತಮ ದಿನ. ವ್ಯಾಪಾರ ಉದ್ದೇಶಕ್ಕಾಗಿ ಕೈಗೊಂಡ ಹಠಾತ್ ಪ್ರವಾಸವು ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ವಿದೇಶಗಳೊಂದಿಗೆ ಸಂಬಂಧ ಹೊಂದಿರುವ ವ್ಯಾಪಾರಿಗಳು ಮತ್ತು ಉದ್ಯಮಿಗಳು ಇಂದು ಹಣಕಾಸಿನ ವ್ಯವಹಾರಕ್ಕೆ ಅನುಗುಣವಾಗಿ ಯಾವುದೇ ಹೆಜ್ಜೆ ಮುಂದಿಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. ಮತ್ತು ವ್ಯವಹಾರದಲ್ಲಿ ಜಾಗರೂಕರಾಗಿರಿ.
ಕನ್ಯಾ ರಾಶಿ
ವ್ಯಾಪಾರ ಅಥವಾ ಉದ್ಯೋಗದಲ್ಲಿ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಸ್ವತಂತ್ರವಾಗಿ ಯೋಚಿಸಿ ಮತ್ತು ಹೊಸ ಹೂಡಿಕೆಗಳನ್ನು ಮಾಡಲು ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಿ.
ತುಲಾ ರಾಶಿ
ಗ್ರಹಗಳು ಮತ್ತು ನಕ್ಷತ್ರ ಗಳ ಲಾಭದಾಯಕ ಸ್ಥಾನದಿಂದಾಗಿ ಇಂದು ಹಣವನ್ನುಗಳಿಸಲು ಸಹಾಯ ವಾಗುತ್ತದೆ. ಜೊತೆಗೆ ಹಲವಾರು ಅವಕಾಶಗಳನ್ನು ಪಡೆಯುತ್ತೀರಿ. ಪ್ರಭಾವಿ ಮತ್ತು ಪ್ರಮುಖ ವ್ಯಕ್ತಿ ಗಳೊಂದಿಗೆ ನಿಮ್ಮ ಬಾಂಧವ್ಯವನ್ನು ಸುಧಾರಿಸಲು ಅವಕಾಶ ಸಿಗುತ್ತದೆ.
ವೃಶ್ಚಿಕ ರಾಶಿ
ವೈಯಕ್ತಿಕ ವಿಷಯ ಗಳನ್ನು ಅರ್ಥ ಮಾಡಿಕೊಳ್ಳಲು ನೀವು ಉದಾರವಾಗಿರಿ. ವೃತ್ತಿ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಏಕಾಗ್ರತೆಯಿಂದ ಕೆಲಸ ಕಾರ್ಯಗಳನ್ನು ಮಾಡಿ.
ಧನಸ್ಸು ರಾಶಿ
ನಿಮ್ಮ ಕಠಿಣ ಪರಿಶ್ರಮ ಕೈ ಹಿಡಿಯಲಿದೆ. ಇಂದು ನಿಮಗೆ ಕೆಲವು ಆರ್ಥಿಕ ಪ್ರತಿಫಲಗಳು ಸಿಗಲಿವೆ.ಇಂದು ಲಾಭದಾಯಕ ದಿನ ವಾಗಿರುತ್ತದೆ. ಸೆಮಿನಾರ್‌ಗಳು ಮತ್ತು ಪ್ರದರ್ಶನಗಳು ನಿಮಗೆ ಹೊಸ ಜ್ಞಾನ ಮತ್ತು ಸಂಪರ್ಕಗಳನ್ನು ಒದಗಿಸುತ್ತವೆ.
ಮಕರ ರಾಶಿ
ಯಾವುದೇ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ. ನಿಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದರಿಂದ ನೀವು ಪ್ರಯೋಜನ ಪಡೆಯುತ್ತೀರಿ. ಖರ್ಚುವೆಚ್ಚಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ.
ಕುಂಭ ರಾಶಿ
ಈ ದಿನ ನಿರ್ದಿಷ್ಟ ವಿಷಯದ ಬಗ್ಗೆ ನಿಮ್ಮ ಆಲೋಚನೆ ಬದಲಾಗಬಹು ದು. ಇದರೊಂದಿಗೆ, ಆದಾಯವನ್ನು ಹೆಚ್ಚಿಸಲು ಕೆಲವು ಉತ್ತಮ ಅವಕಾಶಗಳನ್ನು ಸಹ ಪಡೆಯಬಹುದು. ಆನ್‌ಲೈನ್ ವಹಿವಾಟಿನಲ್ಲಿ ಜಾಗರೂಕರಾಗಿರಿ. ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ಯಶಸ್ಸು ಕಾಣುವರು.
ಮೀನ ರಾಶಿ
ಹೊಸ ಕೆಲಸದ ಕಡೆಗೆ ಒಲವು ತೋರುತ್ತೀರಿ. ನಿಮ್ಮ ಶಕ್ತಿ ಮತ್ತು ಧೈರ್ಯದ ಬಲದಿಂದ ಯಶಸ್ಸು ಕಾಣುವಿರಿ, ಯುವಕರು ವೃತ್ತಿಗೆ ಸಂಬಂಧಿ ಸಿದ ಹೊಸ ಮಾಹಿತಿಯನ್ನು ಪಡೆಯುತ್ತಾರೆ. ಕೆಲಸ ಕಾರ್ಯಗಳಲ್ಲಿ ವಿಸ್ತರಣೆಗೆ ಹಣದ ಅವಶ್ಯಕತೆ ಬರಬಹುದು, ವಿಸ್ತರಣೆಯ ಯೋಚನೆಯನ್ನು ಸದ್ಯಕ್ಕೆ ಬಿಡುವುದು ಉತ್ತಮ.
ತಿಥಿ: ದ್ವಿತೀಯಾ
ನಕ್ಷತ್ರ: ಮಖಾ ನಕ್ಷತ್ರ
ಈ ದಿನದ ವಿಶೇಷ: ದೊಡ್ಡಬಳ್ಳಾಪುರ ನಗರ ತೇರಿನ ಬೀದಿ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ.
ರಾಹುಕಾಲ: 03:00PM ರಿಂದ 04:30PM
ಗುಳಿಕಕಾಲ: 12:00PM ರಿಂದ 01:30PM
ಯಮಗಂಡಕಾಲ: 09:00AM ರಿಂದ 10:30AM
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಿದ್ವಾನ್ ಎಸ್.ನವೀನ್ M.A., ರಾಜ್ಯ ಜಂಟಿ ಕಾರ್ಯದರ್ಶಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ.) ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ದೊಡ್ಡಬಳ್ಳಾಪುರ. ಮೊ:9620445122