ಗುಂಟೂರು: ನೆರೆಯ ಆಂಧ್ರಪ್ರದೇಶದ (Andhra Pradesh) ರಾಜಕೀಯ (Political) ಅಖಾಡದಲ್ಲಿ ಹಿಂಸಾಚಾರದ (Violence) ಕಿಡಿ ಹೊತ್ತಿಕೊಂಡಿದ್ದು, ವೈಎಸ್‌ಆರ್‌ಸಿಪಿ (YSRCP) ನಾಯಕರ ಮನೆಗಳ ಮೇಲೆ ನಡೆದ ಸರಣಿ ದಾಳಿಗಳು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿವೆ.
Murder attempt on YSRCP former minister, Kapu Leader Ambati Rambabu has exposed the frightening collapse of law and order in Andhra Pradesh. In Guntur, thousands of TDP followers, acting in a pre planned and coordinated manner under the direction of MLA Galla Madhavi and with… pic.twitter.com/GJ522OefrF
— YSR Congress Party (@YSRCParty) January 31, 2026
ಇದರಿಂದಾಗಿ ಆಂಧ್ರಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಠಿಣ ನಿಲುವು ತಳೆದಿದ್ದು, ತಮ್ಮದೇ ಪಕ್ಷದ ಟಿಡಿಪಿ ಕಾರ್ಯಕರ್ತರಾಗಿದ್ದರೂ ಕಾನೂನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆದೇಶ ನೀಡಿದ್ದಾರೆ.
ಈ ಬೆಳವಣಿಗೆಯು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಇಷ್ಟಕ್ಕೂ ಆಗಿದ್ದು ಏನೆಂದು ನೋಡುವುದಾದರೆ, ತಿರುಮಲ ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ಪ್ರಕರಣ ಸಂಬಂಧಿಸಿದಂತೆ ಆಂಧ್ರಪ್ರದೇಶದಲ್ಲಿ ದೊಡ್ಡಮಟ್ಟದ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಅಂತೆಯೇ ಗುಂಟೂರು ಜಿಲ್ಲೆಯಲ್ಲಿ ಟಿಡಿಪಿ ನಾಯಕರು ಮಹಾಪಾಪಂ ಎಂಬ ಶೀರ್ಷಿಕೆಯ ಫ್ರೆಕ್ಸ್ ಅನ್ನು ಅಳವಡಿಸಿದ್ದಾರೆ.
ಇದರಿಂದ ಕೆರಳಿದ ವೈಎಸ್‌ಆರ್‌ಸಿಪಿ ನಾಯಕ ಅಂಬಟಿ ರಾಂಬಾಬು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪೊಲೀಸರು ಬೇಡ ಅಂದರೂ ಸಹ ಆ ಪ್ಲೆಕ್ಸ್ ಅನ್ನು ಕೆಡುವುದಾಗಿ ತೆರಳಿದ್ದರು.
What TDP supporters did at Ambati Rambabu's house today is no different from what YSRCP supporters did to the TDP office in Mangalagiri, a few years ago. pic.twitter.com/evQI0aLw9X
— Satya (@YoursSatya) January 31, 2026
ಇದಕ್ಕೆ ತಿರುಗಿ ಬಿದ್ದ ಟಿಡಿಪಿ ಕಾರ್ಯಕರ್ತರು, ಅವರ ಕಾರನ್ನು ತಡೆದರು. ಈ ವೇಳೆ ಅಂಬಟಿ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಅವಹೇಳನಕಾರಿ ಯಾಗಿ ಮಾತನಾಡಿದ್ದಾರೆ.
Strong action must be taken against Ambati Rambabu for his arrogant and abusive remarks.#YSRCriminalParty.
— Abhi🐆 (@HungryCheetah_) January 31, 2026
If we can’t protect a CM’s dignity, how will we protect common people?
A former minister acting like a street rogue sets a terrible example. pic.twitter.com/FrpYsNTjo7…
ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಯಿಂದ ಕೆರಳಿದ ಪ್ರತಿಭಟನಾಕಾರರು ನಾಕಾರರು, ಅಂಬಟಿ ಮನೆಗೆ ನುಗ್ಗಿ ಪೀಠೋ ಪಕರಣ, ಎಸಿ ಹಾಗೂ ಕಾರುಗಳನ್ನು ಧ್ವಂಸಗೊಳಿಸಿ ದ್ದಾರೆ. ಜೊತೆಗೆ ಕಲ್ಲು ಮತ್ತು ಮೊಟ್ಟೆಗಳನ್ನು ಎಸೆಯುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
Murder attempt on YSRCP former minister, Kapu Leader Ambati Rambabu has exposed the frightening collapse of law and order in Andhra Pradesh. In Guntur, thousands of TDP followers, acting in a pre planned and coordinated manner under the direction of MLA Galla Madhavi and with… pic.twitter.com/GJ522OefrF
— YSR Congress Party (@YSRCParty) January 31, 2026
ಈ ಘಟನೆಯಿಂದಾಗಿ ಗುಂಟೂ ರಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣ ವಾಗಿದ್ದು, ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮತ್ತೊಂದೆಡೆ, ಮಾಜಿ ಸಚಿವ ಅಂಬಟಿ ರಾಂಬಾಬು ಸಿಎಂ ಚಂದ್ರಬಾಬು ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದಂತೆಯೇ, ಮತ್ತೋರ್ವ ವೈಎಸ್ ಆರ್‌ಪಿ ನಾಯಕ ಜೋಗಿ ರಮೇಶ್ ಕೂಡ ಸಚಿವ ನಾರಾ ಲೋಕೇಶ್ ವಿರುದ್ಧ ಇದೇ ರೀತಿಯ ಅವಹೇಳನಕಾರಿ ಹೇಳಿಕೆ ನೀಡಿದ್ದರು.