ದೊಡ್ಡಬಳ್ಳಾಪುರ: ತಾಲೂಕಿನ ಹಲವು ಗ್ರಾಮಪಂಚಾಯಿತಿ (Grama Panchayat) ಚುನಾಯಿತ ಸದಸ್ಯರ ಅಧಿಕಾರಾವಧಿ ನಾಳೆ (ಫೆ.04) ನಾಡಿದ್ದು (ಫೆ.05) ಮುಗಿಯಲಿರುವ ಆಡಳಿತಾಧಿಕಾರಿಯನ್ನು ನೇಮಿಸಿ ಚುನಾವಣೆ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಆದೇಶಿಸಿದ್ದಾರೆ.
ಇದರ ಅನ್ವಯ ದೊಡ್ಡಬಳ್ಳಾಪುರ ತಾಲೂಕಿನ 26 ಗ್ರಾಮಪಂಚಾಯಿತಿಗಳು, ಹೊಸಕೋಟೆ ತಾಲೂಕಿನ 28, ದೇವನಹಳ್ಳಿ ತಾಲೂಕಿನ 20 ಹಾಗೂ ನೆಲಮಂಗಲ ತಾಲೂಕಿನ 20 ಗ್ರಾಮಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸಲಾಗಿದೆ.
ಉಳಿದಂತೆ ಅವಧಿ ಮುಗಿದ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮಪಂಚಾಯಿತಿಗಳನ್ನು ನೋಡುವುದಾದರೆ, ಕೊಡಿಗೇಹಳ್ಳಿ, ಕೆಸ್ತೂರು, ರಾಜಘಟ್ಟ, ಹೆಗ್ಗಡಿಹಳ್ಳಿ, ಕಂಟನಕುಂಟೆ, ಕೊನಘಟ್ಟ, ತೂಬಗೆರೆ, ಮೆಳೆಕೋಟೆ.
ತಿಪ್ಪೂರು, ಹಣಬೆ, ಹಾದ್ರಿಪುರ, ದೊಡ್ಡಬೆಳವಂಗಲ, ಹುಲಿಕುಂಟೆ, ಸಕ್ಕರೆಗೊಲ್ಲಹಳ್ಳಿ, ಭಕ್ತರಹಳ್ಳಿ, ಸಾಸಲು, ಆರೂಢಿ, ಹೊಸಹಳ್ಳಿ, ಚನ್ನಾದೇವಿ ಅಗ್ರಹಾರ, ದೊಡ್ಡತುಮಕೂರು, ಕನಸವಾಡಿ, ಹೊನ್ನಾವರ, ಮೇಲಿನಜೂಗಾನಹಳ್ಳಿ, ಹಾಡೋನಹಳ್ಳಿ, ಕಾಡನೂರು ಹಾಗೂ ಮಜರಾಹೊಸಹಳ್ಳಿಯ ಸದಸ್ಯ ಸ್ಥಾನದ ಅವಧಿ ಅಂತ್ಯಗೊಂಡಿದ್ದು, ವಿವಿಧ ಇಲಾಖೆಯ ಅಧಿಕಾರಿಗಳನ್ನು ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ.