ದೊಡ್ಡಬಳ್ಳಾಪುರ: ನಗರದ ಸರಸ್ವತಿ ಶಾಲೆಯ (Saraswati School) ಪೂರ್ವ ಪ್ರಾಥಮಿಕ ತರಗತಿಗಳಿಗಾಗಿ ಆಧುನಿಕ ಸೌಲಭ್ಯ ಗಳಿಂದ ಕೂಡಿದ ವಿಶಾಲವಾದ ತರಗತಿಗಳನ್ನು ಹೊಂದಿರುವ ಹೊಸ ಕಟ್ಟಡವನ್ನು ಉದ್ಘಾಟಿಸಲಾಯಿತು.

ಸರಸ್ವತಿ ಸಂಸ್ಥೆಯ ಅಧ್ಯಕ್ಷರಾದ ಎ. ಸುಬ್ರಮಣ್ಯ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿದರು.
ಇದೇ ಸಮಯದಲ್ಲಿ ಪೂರ್ವ ಪ್ರಾಥಮಿಕ ತರಗತಿ ಮಕ್ಕಳಿಗಾಗಿ “Fruits And Vegitables Day” ಅಯೋಜಿಸಲಾಗಿತ್ತು.

ಇದರ ಅಂಗವಾಗಿ ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಮಕ್ಕಳು ಹಣ್ಣುತರಕಾರಿಗಳ ವೇಷಗಳನ್ನು ಧರಿಸಿ ಹಣ್ಣು ತರಕಾರಿಗಳ ವಿವರ ನೀಡಿದರು.
ಕಾರ್ಯಕ್ರಮದಲ್ಲಿ ಸರಸ್ವತಿ ಸಂಸ್ಥೆಯ ಕಾರ್ಯದರ್ಶಿ ಜಿ.ಎಸ್.ಮಂಜುಳಾ ಸುಬ್ರಮಣ್ಯ, ಮುಖ್ಯಶಿಕ್ಷಕ ಬಿ.ಕೆ. ಸಂಪತ್ ಕುಮಾರ್ ಮತ್ತು ಶಿಕ್ಷಕರು ಇದ್ದರು.
