ದೊಡ್ಡಬಳ್ಳಾಪುರ: ನಾಳೆ (ಫೆ.08)ರಂದು 5ನೇ ಉಪಕೇಂದ್ರದಲ್ಲಿ ನಡೆಯಬೇಕಿದ್ದ ಮಾಸಿಕ ನಿರ್ವಣೆ ಕಾರ್ಯವನ್ನು ದಿಢೀರ್ ಮುಂದೂಡಲಾಗಿದೆ.
ಈ ಕುರಿತಂತೆ ಬೆಸ್ಕಾಂ ದೊಡ್ಡಬಳ್ಳಾಪುರ ಗ್ರಾಮಾಂತರ ಉಪವಿಭಾಗದ ಎಇಇ ಮಂಜುನಾಥ್ ಅವರು ಪ್ರಕಟಣೆ ನೀಡಿದ್ದು, ತೂಬಗೆರೆ 66/11 ಕೆ.ವಿ ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯಲ್ಲಿ ಮಾಸಿಕ ನಿರ್ವಹಣಾ ಕಾರ್ಯವನ್ನು ಮುಂದೂಡಲಾಗಿದ್ದು, ವಿದ್ಯುತ್ ಪೂರೈಕೆ ವ್ಯತ್ಯಯ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಆದ್ದರಿಂದ ವಿದ್ಯುತ್ ಅಡಚಣೆ ಬಗ್ಗೆ ಎಚ್.ಟಿ ಮತ್ತು ಎಲ್,ಟಿ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.