ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕಾರ್ಯಾರಂಭಗೊಂಡು ಶತಮಾನ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ನೆಹರು ಸೆಂಟರ್ ಆಡಿಟೋರಿಯಂನಲ್ಲಿ ಆರ್ಎಸ್ ಎಸ್ ವತಿಯಿಂದ ಶನಿವಾರ ಯೋಜಿಸಲಾಗಿದ್ದ ‘ಮುಂಬೈ ವ್ಯಾಖ್ಯಾ ಯನಮಾಲಾ’ ಕಾರ್ಯಕ್ರಮದಲ್ಲಿ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ( Salman Khan) ಅತಿಥಿಯಾಗಿ ಭಾಗಿಯಾಗಿದ್ದರು.
#SuperStar SalmanKhan attends the #RSS program addressed by Pujaniya Sarsanghchalak Dr Mohan ji Bhagavat at #Mumbai.@BeingSalmanKhan @DrMohanBhagwat @RSSorg @friendsofrss #RSS100Years #RSSNewHorizons pic.twitter.com/OTZz7Kcjgj
— KVS Haridas 🇮🇳 (@keveeyes) February 7, 2026
ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ‘100 ವರ್ಷಗಳಲ್ಲಿ ಸಂಘದ ಪಯಣ: ಹೊಸ ದಿಗಂತ’ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ RSS ಚಟುವಟಿಕೆಗಳು, ಸಮಾಜದ ಜತೆಗಿನ ನಂಟಿನ ಕುರಿತೂ ಪರಿಚಯವಿರಲಿದೆ ಎಂದು ಹೇಳಲಾಗಿದೆ.