ದೊಡ್ಡಬಳ್ಳಾಪುರ: ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ (Ghati Subrahmanya Temple) ಶುಕ್ರವಾರವಾದ ಇಂದು ಹುಂಡಿ ಕಾಣಿಕೆ ಎಣಿಕೆ ಕಾರ್ಯ ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಘಾಟಿ ಸುಬ್ರಹ್ಮಣ್ಯ ದೇವರ ಹುಂಡಿಯಲ್ಲಿ ಹಾಕಲಾಗಿದ್ದ ಕಾಣಿಕೆಯನ್ನು ಇಂದು ಎಣಿಕೆ ಮಾಡಲಾಯಿತು. ಹುಂಡಿ ಎಣಿಕೆಯಲ್ಲಿ 81 ಲಕ್ಷ 94 ಸಾವಿರ 583ರೂ ಸಂಗ್ರಹವಾಗುವ ಮೂಲಕ ಕೋಟಿಯ ಸಮೀಪಕ್ಕೆ ಕಾಣಿಕೆ ಸಂಗ್ರಹ ಬಂದಿದೆ.
ಇದರೊಂದಿಗೆ 1 ಕೆಜಿ 337ಗ್ರಾಂ ಬೆಳ್ಳಿ, 25 ಮಿಲಿ ಚಿನ್ನವನ್ನು ಭಕ್ತರು ಹುಂಡಿಗೆ ಅರ್ಪಿಸಿದ್ದಾರೆ.
ಇಂದು ಹುಂಡಿಯನ್ನು ತೆಗೆದು ಎಣಿಸಲಾಗಿದ್ದು, ಎಣಿಕೆ ಕಾರ್ಯದಲ್ಲಿ ಆಡಳಿತ ಮಂಡಲಿ ಪದಾಧಿಕಾರಿಗಳು, ಸಿಬ್ಬಂದಿ, ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು.