ಚಿಕ್ಕಬಳ್ಳಾಪುರ: ಪ್ರಥಮವಾಗಿ ಚಿಕ್ಕಬಳ್ಳಾಪುರದ ಜನರ ಸಹಕಾರದಿಂದ 4ನೇ ಮಹಾಶಿವರಾತ್ರಿಯನ್ನು (Mahashivratri celebration) ಸದ್ಗುರು ಸನ್ನಿಧಿಯಲ್ಲಿ ಆಚರಿಸಲಾಗುತ್ತಿದೆ.
ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಸದ್ಗುರು ಅವರ ಉಪಸ್ಥಿತಿಯಲ್ಲಿ 33ನೇ ಮಹಾಶಿವರಾತ್ರಿ ಆಚರಣೆ ನಡೆಯಲಿದ್ದು, ಆಚರಣೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಾಹಿತಿ ಮತ್ತು ಪ್ರಸಾರ ಸಚಿವ ಎಲ್. ಮುರುಗನ್ ಹಾಗೂ ಇತರ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ.
ಮಹಾಶಿವರಾತ್ರಿ ಆಚರಣೆಯ ನೇರ ಪ್ರಸಾರವನ್ನು ಸದ್ಗುರು ಸನ್ನಿಧಿಯಲ್ಲಿ ಮಾಡಲಾಗುತ್ತದೆ. ಈ ಕಾರ್ಯಕ್ರಮವು 100ಕ್ಕೂ ಹೆಚ್ಚು ಟಿವಿ ಚಾನೆಲ್ಗಳಲ್ಲಿ ಪ್ರಸಾರವಾಗಲಿದ್ದು, 23 ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ಲಭ್ಯವಿರುತ್ತದೆ. ಈ ಬಾರಿ 14 ಕೋಟಿಗೂ ಹೆಚ್ಚು ವೀಕ್ಷಕರನ್ನು ತಲುಪುವ ನಿರೀಕ್ಷೆಯಿದೆ.
ಪ್ರಸಾದ: ಬರುವ ಭಕ್ತರಿಗೆ ಅನ್ನಪ್ರಸಾದ ಲಭ್ಯವಿರುತ್ತದೆ ಹಾಗೂ ರುದ್ರಾಕ್ಷಿಯನ್ನು ವಿತರಿಸಲಾಗುತ್ತದೆ.
ಪಾರ್ಕಿಂಗ್: ಈ ಬಾರಿ ಭಕ್ತರಿಗೆ ಅನುಕೂಲವಾಗುವಂತೆ ಯೋಗ ದ್ವಾರದಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
Transport (ಶಟಲ್): ಉಚಿತ ಶಟಲ್ ಸೌಲಭ್ಯವನ್ನು ಕೂಡ ಆಯೋಜಿಸಲಾಗಿದೆ.
ಪೊಲೀಸ್ ಹೊರಠಾಣೆ: ಭಕ್ತರು ಹಾಗೂ ಸುತ್ತಮುತ್ತಲಿನ ಜನರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಪೊಲೀಸ್ ಇಲಾಖೆಯು ಹೊಸ ಪೊಲೀಸ್ ಹೊರಠಾಣೆಯನ್ನು ತೆರೆದಿದ್ದಾರೆ.
ಸ್ವಯಂಸೇವಕರು: ಈಶದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಸ್ವಯಂಸೇವಕರು ಆಯೋಜಿಸುತ್ತಾರೆ. ಈ ಕಾರ್ಯಕ್ರಮಕ್ಕೂ ಬಹಳಷ್ಟು ಸ್ವಯಂಸೇವಕರು, 300 ಸ್ಕೌಟ್ಸ್ ಮತ್ತು ಗೈಡ್ಸ್, NCC ಪಟುಗಳೂ ಪೊಲೀಸ್ ಸಿಬ್ಬಂದಿಗಳೂ ಸಹಕರಿಸಲಿದ್ದಾರೆ.
Ambulance & Medical Tents: 2 ಆಂಬುಲೆನ್ಸ್ ಹಾಗೂ Medical Tents, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳು ಲಭ್ಯವಿರುತ್ತವೆ.
ಶೌಚಾಲಯಗಳು: ಈಗಿರುವ ಶೌಚಾಲಯಗಳ ಜೊತೆಗೆ ಹೆಚ್ಚುವರಿ ಶೌಚಾಲಯಗಳೂ ಲಭ್ಯವಿರುತ್ತವೆ.
ಕಳೆದ ವರ್ಷ ಸುಮಾರು 2 ಲಕ್ಷ ಜನರು ಭಾಗವಹಿಸಿದ್ದರು. ಈ ವರ್ಷ ಸುಮಾರು 3 ಲಕ್ಷ ಭಕ್ತರನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಪ್ರಕಟಣೆ ತಿಳಿಸಿದೆ.