ದೊಡ್ಡಬಳ್ಳಾಪುರ: ಖಾಸಗಿ ಗೋದಿ ಉಪ ಉತ್ಪನ್ನ ಕೇಂದ್ರದ ಹಳೇ ಕಟ್ಟಡಕ್ಕೆ ಬೆಂಕಿ (Fire) ತಗುಲಿ, 7 ಮಹಡಿ ಕಟ್ಟಡ ಹಾನಿಯಾಗಿದೆ.
ದೊಡ್ಡಬಳ್ಳಾಪುರ- ನೆಲಮಂಗಲ ರಸ್ತೆಯ ಕನ್ನಮಂಗಲ ಗೇಟ್ ಬಳಿ ಶನಿವಾರ ರಾತ್ರಿ ಈ ಘಟನೆ ವರದಿಯಾಗಿದೆ.
ಪಾಳು ಬಿದ್ದಂತಿದ್ದ ಕಟ್ಟಡದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹರಡಿರಬಹುದು ಎಂದು ಅಂದಾಜಿಸಲಾಗಿದೆ.
ಕಟ್ಟಡದಲ್ಲಿ ಕಾರ್ಯ ನಿರ್ವಹಿಸದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.