ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಚಿಕ್ಕಮಧುರೆ (Chikkamadhure) ಶ್ರೀ ಶನಿಮಹಾತ್ಮ ಸ್ವಾಮಿಯ 71ನೇ ಬ್ರಹ್ಮರಥೋತ್ಸವದ ಅಂಗವಾಗಿ ನಾಳೆ (ಮಾ.04) ತೆಪ್ಪೋತ್ಸವ ಆಯೋಜಿಸಲಾಗಿದೆ.
ಮಧುರೆ ಅಮಾನಿ ಕೆರೆಯಲ್ಲಿ ಚನ್ನಾದೇವಿ ಅಗ್ರಹಾರ ಹಾಗೂ ಗಾರಡಿಗರಪಾಳ್ಯ ಗ್ರಾಮಸ್ಥರಿಂದ ನಾಳೆ ಸಂಜೆ 4:00ಗೆ ಶ್ರೀ ಶನೇಶ್ವರ ಸ್ವಾಮಿಯ ತೆಪ್ಪೋತ್ಸವ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಜನಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಉಪ ನಗರ ವರ್ತುಲ ಯೋಜನೆ ಪ್ರಾಧಿಕಾರದ ಸದಸ್ಯ ದೀಪು ತಿಳಿಸಿದ್ದಾರೆ.