ದೊಡ್ಡಬಳ್ಳಾಪುರ: ತಾಲೂಕಿನ ರಾಂಪುರ ಹಾಲು ಉತ್ಪಾದಕರ ಸಹಕಾರ ಸಂಘದ (MPCS) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.
ಚುನಾವಣೆ ಅಧಿಕಾರಿ ಭಾಸ್ಕರ್ ನೇತೃತ್ವದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಭಾಗ್ಯಮ್ಮ ಜಯರಾಮ್, ಉಪಾಧ್ಯಕ್ಷ ಶಾರಧಮ್ಮ ಕುಮಾರಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಬಿಜೆಪಿ ಮುಖಂಡ ಚನ್ನೇಗೌಡ, ಮುಖಂಡರಾದ ಸುಬ್ಬರಾಯಪ್ಪ, ರಾಂಪುರ ಹಾಲು ಉತ್ಪಾದಕರ ಸಹಕಾರ ಸಂಘ (MPCS) ಸದಸ್ಯರಾದ ಪುಟ್ಟರಂಗೇಗೌಡ, ಟಿ.ಆರ್. ರಮೇಶ್, ಕೃಷ್ಣಮೂರ್ತಿ, ಟಿ.ಆರ್. ಕೃಷ್ಣಪ್ಪ, ಮುನಿರಾಜು, ನರಸಿಂಹಯ್ಯ, ಕುಸುಮ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ