ದೊಡ್ಡಬಳ್ಳಾಪುರ: ಬ್ರೈನೊಬ್ರೈನ್ ಅಬಾಕಸ್ ಸಂಸ್ಥೆಯು ಆಯೋಜಿಸಿದ್ದ 16ನೇ ಅಂತಾರಾಷ್ಟ್ರೀಯ ಆನ್‍ಲೈನ್ ಸ್ಪರ್ಧೆಯಲ್ಲಿ (abacus competition) ದೊಡ್ಡಬಳ್ಳಾಪುರ ತಾಲೂಕಿನ ಪ್ರತಿಷ್ಠಿತ ಎಂಎಸ್‌ವಿ ಪಬ್ಲಿಕ್ ಶಾಲೆಯ (MSV Public School) ಮಕ್ಕಳು ಉತ್ತಮ ಸಾಧನೆ ತೋರಿದ್ದು, ಚಾಂಪಿಯನ್ ಟ್ರೋಫಿ (Champion trophy) ಹಾಗೂ ಚಿನ್ನದ ಪದಕಗಳನ್ನು (Gold Medal) ಪಡೆದಿದ್ದಾರೆ.
10 ಚಾಂಪಿಯನ್ ಟ್ರೋಫಿ ಹಾಗೂ 1 ಚಿನ್ನದ ಪದಕ ಪಡೆದಿರುವುದು ಶಾಲೆಗೆ ಮತ್ತು ಪೋಷಕರಿಗೆ ಹೆಮ್ಮೆಯ ವಿಷಯವಾಗಿದೆ.
ಚಾಂಪಿಯನ್ ಟ್ರೋಫಿ ವಿಜೇತರು
ಜೆ. ಜೆಫ್ರಿ ಜೇನ್ – ಮಾಂಟೆಸ್ಸರಿ 1
ಧನ್ವಿಕ್ ಅಭಿರಾಮ್ – 1ನೇ ತರಗತಿ
ಲಿತಾನ್ ಕುಮಾರ್- 2ನೇ ತರಗತಿ
ಹನ್ವಿಥ್ ಸಿ ಗೌಡ- 1ನೇ ತರಗತಿ
ಡಿಂಪಲ್ ಜಿ.ಆರ್. – 3ನೇ ತರಗತಿ
ದೀಪಕ್.ಐ.ಪಿ. – 3ನೇ ತರಗತಿ
ನಿಖಿಲ್.ಪಿ.ಎಸ್. – 4ನೇ ತರಗತಿ
ಅಖಿಲಾ- 5ನೇ ತರಗತಿ
ರೇಣುಕಾ.ಜಿ.ಆರ್. – 6ನೇ ತರಗತಿ
ಭುವನ್.ಇ. – 9ನೇ ತರಗತಿ.
ಚಿನ್ನದ ಪದಕ ಪಡೆದವರು
- ಪ್ರಣಿತಾ.ಎಂ.- 6ನೇ ತರಗತಿ
ಟ್ರೋಫಿ, ಪದಕ ವಿತರಿಸಿ ಮಾತನಾಡಿದ ಶಾಲೆಯ ಅಧ್ಯಕ್ಷ ಸುಬ್ರಮಣ್ಯ ಮಾತನಾಡಿ,
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಈ ಮಕ್ಕಳ ಸಾಧನೆ ಶ್ಲಾಘನೀಯ. ಉತ್ತಮ ಶಿಕ್ಷಣ, ಸಂಸ್ಕಾರದೊಂದಿಗೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲಿ ಎಂದು ಹರಸಿದರು.

ಪ್ರಾಂಶುಪಾಲರಾದ ರೆಮ್ಯ ಬಿ ವಿ ಮಾತನಾಡಿ, ಸ್ಪರ್ಧೆಯಲ್ಲಿ ಮಕ್ಕಳ ಈ ಸಾಧನೆ ಶ್ಲಾಘನೀಯವಾದದ್ದು, ಮಕ್ಕಳ ಶ್ರದ್ಧೆ – ಸಾಧನೆ ಪೋಷಕರಿಗೆ ಹಾಗೂ ಶಾಲೆಗೆ ಹೆಮ್ಮೆ ತಂದಿದೆ. ಮಕ್ಕಳ ಸಾಧನೆ ಇನ್ನೂ ಉನ್ನತ ಮಟ್ಟಕ್ಕೆ ತಲುಪಲಿ ಎಂದು ಹಾರೈಸಿದರು.
ಈ ವೇಳೆ ಶಾಲೆಯ ಉಪಾಧ್ಯಕ್ಷ ಸ್ವರೂಪ್ ಎಸ್. ಸೇರಿದಂತೆ ಶಿಕ್ಷಕ ವೃಂದ ಸಾಧನೆಗೈದ ಮಕ್ಕಳನ್ನು ಅಭಿನಂದಿಸಿದರು.