ದೊಡ್ಡಬಳ್ಳಾಪುರ: ಸಂಕಷ್ಟ ಚತುರ್ಥಿ (Sankashta Chaturthi) ಹಿನ್ನೆಲೆಯಲ್ಲಿ ನಿನ್ನೆ ತಾಲೂಕಿನ ಆರೂಢಿ (Arudi) ಗ್ರಾಮದ ಬಸ್ ನಿಲ್ದಾಣ ಬಳಿಯಿರುವ ಬಲಮುರಿ ಗಣಪತಿ ದೇವಾಲಯದಲ್ಲಿ ಗಂಧದ ಅಲಂಕಾರ, ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು.
ಸಂಕಷ್ಟ ಚತುರ್ಥಿ ಹಿನ್ನೆಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೂ ದೇವಾಲಯದ ಆವರಣದಲ್ಲಿ ಪ್ರಸಾದ ವಿನಿಯೋಗ ಕೈಗೊಳ್ಳಲಾಗಿತ್ತು.
ಸ್ಥಳೀಯ ವರ್ತಕರು ಈ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಸಂಜೆ ಪಾಲನಜೋಗಿಹಳ್ಳಿ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳು, ಶ್ರೀರಾಮ ಸೇನೆ ದಕ್ಷಿಣ ಭಾರತ ಪ್ರಾಂತ್ಯ ಉಸ್ತುವಾರಿಗಳಾದ ಶ್ರೀನಿವಾಸ ಗುರೂಜಿ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಿ, ಸಂಕಷ್ಟ ಚತುರ್ಥಿ (Sankashta Chaturthi) ಹಿನ್ನೆಲೆ, ಪೂಜಾ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪವಿತ್ರವಾದ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಮಹತಗವವನ್ನು ಹೊಂದಿದ್ದು, ಇವುಗಳ ಆಚರಣೆಯನ್ನು ತಪ್ಪದೆ ಪಾಲಿಸುವಂತಡ ಕರೆ ನೀಡಿದರು.
ಅಲ್ಲದೆ ಆಧುನಿಕತೆ ಹೆಚ್ಚಾದಂತೆ ಪಾಶ್ಚಿಮಾತ್ಯ ಸಂಸ್ಕೃತಿಯ ಹಾವಳಿಯ ನಡುವೆಯೂ ಆರೂಢಿಯಂತಹ ಗ್ರಾಮಗಳಲ್ಲಿ ಸಂಕಷ್ಟ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಿ, ಅನ್ನ ಸಂತರ್ಪಣೆ ನಡೆಸುತ್ತಿರುವುದು ಇತರರಿಗೆ ಮಾದರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.