ದೊಡ್ಡಬಳ್ಳಾಪುರ: ಸುಮಾರು 1000 ವರ್ಷ ಇತಿಹಾಸ ಹೊಂದಿರುವ ಸೋಮನಾಥ ಜ್ಯೋತಿರ್ಲಿಂಗವನ್ನು (Somnath Jyotirlinga Darshan) ದೊಡ್ಡಬಳ್ಳಾಪುರ ತಾಲ್ಲೂಕಿನ ಜನತೆ ವೀಕ್ಷಿಸಲು ಅವಕಾಶ ದೊರೆಯುತ್ತಿದೆ.
ಹೌದು ಆರ್ಟ್ ಆಫ್ ಲಿವಿಂಗ್
ದೊಡ್ಡಬಳ್ಳಾಪುರ ಶಾಖೆ ವತಿಯಿಂದ ಮಾರ್ಚ್ 14ರ ಶನಿವಾರ ಬೆಳಗ್ಗೆ 7ರಿಂದ 11ಗಂಟೆ ವರೆಗೆ ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ದೇವಸ್ಥಾನದಲ್ಲಿ ( ಜಿ ರಾಮೇಗೌಡ ವೃತ್ತದ ಸಮೀಪ) ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
1000 ವರ್ಷಗಳ ಹಿಂದೆ ಘಜ್ನಿ ಮಹಮೂದ್ ದಾಳಿಯಿಂದ ವಿಭಜನೆಗೊಂಡಿದ್ದ ಮೂಲ ಸೋಮನಾಥ ಜ್ಯೋತಿರ್ಲಿಂಗದ ತುಣುಕುಗಳನ್ನು, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಮಾರ್ಚ್ 14 ರಂದು ದೊಡ್ಡಬಳ್ಳಾಪುರದಲ್ಲಿ ದರ್ಶನವನ್ನು ಭಕ್ತರಿಗೆ ಕಲ್ಪಿಸಲಾಗಿದೆ.
ಅಗ್ನಿಹೋತ್ರಿ ಬ್ರಾಹ್ಮಣರು ಶತಮಾನಗಳಿಂದ ಸಂರಕ್ಷಿಸಿಟ್ಟಿದ್ದ ಸೋಮನಾಥ ಜ್ಯೋತಿರ್ಲಿಂಗದ ಮೂಲ ಭಾಗ ಇದಾಗಿದೆ.
ಈ ಜ್ಯೋತಿರ್ಲಿಂಗವು ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸದ ಪುನರುತ್ಥಾನದ ಸಂಕೇತವಾಗಿದೆ.