ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಗುಂಡಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ (MPCS) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಸಲಾಗಿದ್ದು, ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಚುನಾವಣೆ ಅಧಿಕಾರಿ ಭಾಸ್ಕರ್ ಅವರ ಸಮ್ಮುಖದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಪಟೇಲಪ್ಪ ಮತ್ತು ಉಪಾಧ್ಯಕ್ಷರಾಗಿ ಆನಂದಕುಮಾರ್ ಅವಿರೋಧವಾಗಿ ಆಯ್ಕಯಾಗಿದ್ದಾರೆ.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಜೆಡಿಎಸ್ ಹಿರಿಯ ಮುಖಂಡರಾದ ಬಿ.ಮುನೇಗೌಡ, ಹುಸ್ಕೂರು ಟಿ. ಆನಂದ್, ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜಾಲಿಗೆರೆ ಚನ್ನೇಗೌಡ, ತಿಪ್ಪೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಚನ್ನರಾಮಯ್ಯ, ಗುಂಡಸಂದ್ರ ಗ್ರಾಮದ ಜೆಡಿಎಸ್ ಮುಖಂಡರು ಹಾಗೂ ವಕೀಲರಾದ ಚನ್ನೇಗೌಡ, ಮುಖಂಡರಾದ ಜಿ.ಟಿರಾಮಯ್ಯ, ಜಿ.ಕೆ.ಬೈಲಪ್ಪ, ಸತ್ಯನಾರಾಯಣ ಮೂರ್ತಿ, ಹೆಚ್.ವೆಂಕಟೇಶ್ ಅಭಿನಂದಿಸಿದ್ದಾರೆ.
ಜೆಡಿಎಸ್‌ಗೆ ಭರ್ಜರಿ ಗೆಲುವು
ಫೆ.28 ರಂದು ಗುಂಡಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ (MPCS) ನಡೆದಿದ್ದ 11 ನಿರ್ದೇಶಕರ ಚುನಾವಣೆಯಲ್ಲಿ 10 ಸ್ಥಾನಗಳನ್ನು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದರು.
ವಿಜೇತರು ಪಟೇಲಪ್ಪ, ಆನಂದಕುಮಾರ್.ಜಿ.ಹೆಚ್., ರಾಜೇಶ್, ಬೈಲಮೂರ್ತಿ, ಆನಂದ್, ರಮೇಶ.ಹೆಚ್., ನಾಗೇಂದ್ರ, ನರಸಿಂಹಮೂರ್ತಿ, ಭಾಗ್ಯಮ್ಮ, ನಾಗಮಣಿ ಹಾಗೂ ಕಾಂಗ್ರೆಸ್ನ ನಾಗರಾಜ್ ಆಯ್ಕೆಯಾಗಿದ್ದರು.