ದೆಹಲಿ: ಇರಾನ್ ವಿರುದ್ದದ ಅಮೆರಿಕ-ಇಸ್ರೇಲ್ ಯುದ್ಧ ಮತ್ತಷ್ಟು ತೀವ್ರಗೊಂಡಿರುವ ಹಿನ್ನೆಲೆ ಭಾರತದ ರೂಪಾಯಿ (Rupee) ಮೌಲ್ಯ ಅಮೆರಿಕದ ಡಾಲರ್ (Dollar) ಎದುರು ಸಾರ್ವಕಾಲಿಕ ಕುಸಿತ ಕಂಡಿದ್ದು, ಶುಕ್ರವಾರದ ವಹಿವಾಟಿನಲ್ಲಿ 1 ಡಾಲರ್ಗೆ 93 ರೂ 71 ಪೈಸೆಗಳ ಮೌಲ್ಯ ಭಾರೀ ಕುಸಿತ ದಾಖಲಿಸಿದೆ.

ಪರಿಣಾಮ ದೇಶದ ಆರ್ಥಿಕತೆಯಲ್ಲಿ ಸಂಚಲನವಾಗಿದ್ದು, ಆಮದು ವಹಿವಾಟಿಗೆ ದೊಡ್ಡ ಪೆಟ್ಟು ಬೀಳುವ ಕಳವಳ ಎದುರಾಗಿದೆ. ಭಾರತ ನಿತ್ಯ ಬಳಕೆಯ ಶೇ.80ರಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತದೆ. ರೂಪಾಯಿ ಮೌಲ್ಯ ಕುಸಿದಿರುವುದರಿಂದಾಗಿ ತೈಲ ಖರೀದಿ ಕಂಪನಿಗಳು ಕಚ್ಚಾತೈಲ ಖರೀದಿಗೆ ಹೆಚ್ಚು ಹಣ ಪಾವತಿಸಬೇಕಿದೆ. ಇದು ಪೆಟ್ರೋಲ್ ದರ ಏರಿಕೆಗೆ ಕಾರಣವಾಗಲಿದೆ.
ಇತರೆ ಆಮದು ಉತ್ಪನ್ನಗಳಾದ ತಾಳೆಎಣ್ಣೆ ಸೇರಿ ವಿವಿಧ ಖಾದ್ಯತೈಲಗಳು, ಸ್ಮಾಟ್ಫೋನ್, ಲ್ಯಾಪ್ಟಾಪ್ ಹಾಗೂ ಅವುಗಳ ಬಿಡಿಭಾಗ ವಿವಿಧ ದೇಶಗಳಿಂದ ಬರಬೇಕಿರುವುದರಿಂದ ಈ ಉತ್ಪನ್ನಗಳ ಬೆಲೆ ಶೇ 5-10ರಷ್ಟು ಹೆಚ್ಚಬಹುದು ಎಂಬ ಕಳವಳ ವ್ಯಕ್ತವಾಗಿದೆ.