ಬೆಳಗಾವಿ: ಯುದ್ಧದ ಪರಿಣಾಮ ಸೂಕ್ತ ಮುಂಜಾಗ್ರತೆ ಕೈಗೊಳ್ಳದ ಕಾರಣ ಭಾರತೀಯರ ಮೇಲೆ ತೀವ್ರತರವಾದ ಸಂಕಷ್ಟ ಎದುರಾಗಿದ್ದು, ಪರದಾಡುವಂತಾಗಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಡುಗೆ ಅನಿಲ ಅಭಾವದಿಂದ ಹೋಟೆಲ್ ನಡೆಸುತ್ತಿದ್ದ ವ್ಯಕ್ತಿಯೋರ್ವ ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಹುಕ್ಕೇರಿ ನಗರದಲ್ಲಿ ನಡೆದಿದೆ.

ಮೃತನನ್ನು ಹನುಮಾನ ಹೋಟೆಲ್ ಮಾಲೀಕ ರಾಮ ಹಳ್ಳೂರಿ (50 ವರ್ಷ) ಎಂದು ಗುರುತಿಸಲಾಗಿದೆ.
ಯುದ್ಧದ ಕಾರಣ ಕೇಂದ್ರದ ಮೋದಿ ಸರ್ಕಾರ ಕಮರ್ಷಿಯಲ್ ಸಿಲಿಂಡರ್ ರದ್ದು ಮಾಡಿರಿಲುವ ಕಾರಣ ಅಡುಗೆ ಅನಿಲ ಅಭಾವ ಉಂಟಾಗಿ ತಾನು ನಡೆಸುತ್ತಿದ್ದ ಹೋಟೆಲ್ ನಡೆಸಲಾಗದೆ, ಮಾಡಲಾಗಿದ್ದ ಸಾಲವನ್ನು ತೀರಿಸಲಾಗದೆ ಕಂಗೆಟ್ಟಿದ್ದರಿ ಎನ್ನಲಾಗಿದೆ.
ಈ ಕುರಿತು ಅವರ ಪುತ್ರ ಉದಯ ಹಳ್ಳೂರಿ ಮಾತನಾಡಿ, ಕಳೆದ ಒಂದು ವಾದದಿಂದ ಗ್ಯಾಸ್ ದೊರಕದೆ, ವ್ಯಾಪಾರ ನಿಲ್ಲಿಸಲಾಗಿತ್ತು. ಇದರಿಂದ ಹೋಟೆಲ್ ಬಾಡಿಗೆ ಮತ್ತು ಸಾಲದ ಮೊತ್ತ ನೀಡಲು ಸಮಸ್ಯೆ ಉಂಟಾಗಿದ್ದು, ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ, ಇಂದು ಮುಂಜಾನೆ ಹೋಟೆಲ್ನಲ್ಲಿ ಹಗ್ಗ ಬಳಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಹುಕ್ಕೇರಿ ಠಾಣೆಯ ಪೋಲಿಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆಂದು ವರದಿಯಾಗಿದೆ.