ನವದೆಹಲಿ; ಇತ್ತೀಚೆಗಷ್ಟೇ ಟೆಲಿಕಾಂ ಸಂಸ್ಥೆಗಳ ಹಗಲು ದರೋಡೆ ಬಯಲು ಮಾಡಿದ್ದ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ (Raghav Chadha) ಅವರು, ಈಗ ಜನರ ದಾರಿತಪ್ಪಿಸುತ್ತಿರುವ ದೊಡ್ಡ ದೊಡ್ಡ ಆಹಾರ ಬ್ರಾಂಡ್ಗಳ ಕರಾಳ ಸತ್ಯವನ್ನು ಬಯಲು ಮಾಡುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.

ಹೌದು ಈ ಕುರಿತು ಸದನದಲ್ಲಿ ಪ್ರಶ್ನಿಸಿರುವ ಅವರು, ತಾಜಾ ಜ್ಯೂಸ್ ಎಂದು ಹಣ್ಣುಗಳ ಚಿತ್ರಗಳನ್ನು ಬಾಟಲ್ ಹಾಗೂ ಟೆಟ್ರಾ ಪ್ಯಾಕೆಟ್ ಮೇಲೆ ಮುದ್ರಿಸಿ ಮಾರಾಟ ಮಾಡುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ್ದು, ಇವುಗಳಲ್ಲಿ ಅನೇಕ ಉತ್ಪನ್ನಗಳು “ಸಕ್ಕರೆ ಸಿರಪ್ಗಳು” ಎಂದು ಎತ್ತಿ ತೋರಿಸಿದರು.
You think you’re drinking Fruit Juice? THINK AGAIN.
— Raghav Chadha (@raghav_chadha) March 24, 2026
Big food brands are selling sugar water with shiny ‘fresh fruit’ pictures on the front. And hiding the truth in tiny fine print at the back of packet which reads ‘Pictures for marketing purposes only’. SERIOUSLY?
Today in… pic.twitter.com/ROu2YGH3G2
ಭಾರತದ ಗ್ರಾಹಕ ಮಾರುಕಟ್ಟೆಯು ಅನಾರೋಗ್ಯದಿಂದ ಕೂಡಿದ್ದು, ಜನರನ್ನು ದಾರಿತಪ್ಪಿಸುವ ಬ್ರ್ಯಾಂಡಿಂಗ್ ಮತ್ತು ಸುಳ್ಳು ಜಾಹೀರಾತು ಎಂದು ಕರೆಯಲಾಗುತ್ತದೆ.
ನಾವು ಹಣ್ಣಿನ ರಸದ ಬಾಟಲಿಯನ್ನು ಖರೀದಿಸಿದಾಗ ಮುಂಭಾಗದಲ್ಲಿ ತಾಜಾ ಹಣ್ಣಿನ ಚಿತ್ರಗಳು ಮುದ್ರಿಸಲಾಗುತ್ತಿದೆ. ಆದರೆ ಹಿಂಭಾಗದಲ್ಲಿ ಸಣ್ಣ ಅಕ್ಷರದಲ್ಲಿ ಈ ಚಿತ್ರವು ಮಾರ್ಕೆಟಿಂಗ್ ಉದ್ದೇಶಕ್ಕಾಗಿ ಮಾತ್ರ ಎಂದು ಹೇಳುತ್ತದೆ.
ಇದರಿಂದಾಗಿ ನಮ್ಮ ದೇಶದ ಗ್ರಾಹಕರು, ವಿಶೇಷವಾಗಿ ಯುವಜನರು ಈ ಪಾನೀಯಗಳು ಆರೋಗ್ಯಕರವೆಂದು, ಪೌಷ್ಟಿಕವೆಂದು ತಪ್ಪಾಗಿ ಭಾವಿಸಿ ಸೇವಿಸುತ್ತಿದ್ದಾರೆ. ಆದರೆ ಇದು ಅವರಲ್ಲಿ ಮಧುಮೇಹ, ಬೊಜ್ಜುತನ, ಇನ್ನಿತರೆ ರೋಗಗಳಿಗೆ ಒಳಪಡುತ್ತಿದ್ದಾರೆ.
ಈ ರೀತಿ ಹೆಚ್ಚಿನ ಸಕ್ಕರೆ ಅಂಶವಿರುವ ಉತ್ಪನ್ನಗಳ ವಿವರಗಳನ್ನು ಪ್ಯಾಕೆಟ್ನ ಮುಂಭಾಗದಲ್ಲಿ ಪ್ರಕಟಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು.
ಉತ್ಪನ್ನ ವರ್ಗದ ಬಗ್ಗೆ ಸ್ಪಷ್ಟತೆ ಕೋರಿದ ಚಡ್ಡಾ, ಉತ್ಪನ್ನಗಳನ್ನು ನಿಜವಾದ ಹಣ್ಣಿನ ರಸ ಮತ್ತು ಸಕ್ಕರೆ, ಸಾಂದ್ರೀಕೃತ ಪಾನೀಯಗಳು ಮತ್ತು ಸಂರಕ್ಷಕಗಳಿಂದ ತಯಾರಿಸಿದ ಪಾನೀಯಗಳ ನಡುವೆ ವರ್ಗೀಕರಿಸಬೇಕೆಂದು ಕರೆ ನೀಡಿದರು.
ಸಂಸತ್ತಿನಲ್ಲಿ ಮಾತನಾಡಿದ ನಂತರ, “ನೀವು ಹಣ್ಣಿನ ರಸ ಕುಡಿಯುತ್ತಿದ್ದೀರಿ ಎಂದು ನೀವು ಭಾವಿಸುತ್ತೀರಾ? ಮತ್ತೊಮ್ಮೆ ಯೋಚಿಸಿ. ದೊಡ್ಡ ಆಹಾರ ಬ್ರಾಂಡ್ಗಳು ಮುಂಭಾಗದಲ್ಲಿ ಹೊಳೆಯುವ ‘ತಾಜಾ ಹಣ್ಣು’ ಚಿತ್ರಗಳೊಂದಿಗೆ ಸಕ್ಕರೆ ನೀರನ್ನು ಮಾರಾಟ ಮಾಡುತ್ತಿವೆ” ಎಂದು ಚಡ್ಡಾ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ದಾರಿತಪ್ಪಿಸುವ ಬ್ರ್ಯಾಂಡಿಂಗ್ ಲಕ್ಷಾಂತರ ಜನರನ್ನು, ವಿಶೇಷವಾಗಿ ಮಕ್ಕಳನ್ನು ಮಧುಮೇಹ ಮತ್ತು ಜೀವನಶೈಲಿ ಕಾಯಿಲೆಗಳಿಗೆ ತಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ಗ್ರಾಹಕರನ್ನು ರಕ್ಷಿಸಲು ಮತ್ತು ಬ್ರ್ಯಾಂಡಿಂಗ್ ಮತ್ತು ಜಾಹೀರಾತು ಪದ್ಧತಿಗಳು ಸತ್ಯವಾದವುಗಳಾಗಿದ್ದು, ಕಾನೂನು ಬಾಹಿರವಲ್ಲ ಎಂದು ಖಚಿತಪಡಿಸಿಕೊಳ್ಳಲು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚಡ್ಡಾ ಅವರು ಮೋದಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.