ದೊಡ್ಡಬಳ್ಳಾಪುರ: ತಾಲೂಕಿನ ವಿವಿದೆಡೆಗಳಲ್ಲಿನ ಶ್ರೀ ರಾಮ ದೇವಾಲಯ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಶ್ರೀರಾಮನವಮಿಯನ್ನು (Sri RamaNavami) ಶ್ರದ್ದಾ ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.

ಶ್ರೀರಾಮನವಮಿ ದೇವಾಲಯಗಳನ್ನು ತಳಿರು ತೋರಣ ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು.
ದೇವಾಲಯಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ, ಶ್ರೀರಾಮ, ಸೀತೆ, ಲಕ್ಷ್ಮಣ, ಆಂಜನೇಯ ಮೂರ್ತಿಗಳಿಗೆ ಹಾಗೂ ಚಿತ್ರಪಟಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ, ಭಕ್ತಾದಿಗಳಿಗೆ ಪಾನಕ, ಕೋಸಂಬರಿ ಪ್ರಸಾದಗಳನ್ನು ವಿತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ನಗರದ ನೆಲದಾಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆಲದಾಂಜನೇಯ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಶ್ರೀ ರಾಮೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದೇವಾಲಯದಲ್ಲಿ ಆಲಿಂಗನ ಶ್ರೀ ರಾಮಾಂಜಿನೇಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಅಂಗವಾಗಿ ವಿಶೇಷ ಪೂಜಾ ಕಾರ್ಯಜಕ್ರಮ ನಡೆಯಿತು.
ಏ.4ರವರೆಗೆ ಪ್ರತಿದಿನ ಬೆಳಿಗ್ಗೆ 9.30ಕ್ಕೆ ಹಾಗೂ ಸಂಜೆ 7ಕ್ಕೆ ಸೇವಾಕರ್ತರಿಂದ ವಿಶೇಷ ಪೂಜೆ ಪ್ರಸಾದ ವಿನಿಯೋಗವಿದೆ.
ದೇವಾಲಯದ ಮುಂಭಾಗ ಬಸ್ ನಿಲ್ದಾಣದ ಮಿನಿ ಲಾರಿ, ಟೆಂಪೋ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಸಾರ್ವಜನಿಕರಿಗೆ ಶ್ರೀ ರಾಮ ನವಮಿ ಅಂಗವಾಗಿ ಪಾನಕ, ಕೋಸಂಬರಿ ಪ್ರಸಾದಗಳನ್ನು ವಿತರಿಸಲಾಯಿತು.
ರಾಜಘಟ್ಟದಲ್ಲಿ ಶ್ರೀರಾಮನವಮಿ ಪ್ರಯುಕ್ತ ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯದಲ್ಲಿ ವಿಶೇಷ ಅಲಂಕಾರ ಪೂಜಾ ಕಾರ್ಯೀಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮಾ.28ರಂದು ಬೆಳಿಗ್ಗೆ 7.30ಕ್ಕೆ ಕಲ್ಯಾಣೋತ್ಸವ ಮಧ್ಯಾಹ್ನ 12.30ಕ್ಕೆ ಶ್ರೀ ರಾಮಾಂಜನೇಯಸ್ವಾಮಿ ರಥೋತ್ಸವ ನಡೆಯಲಿದೆ. ಮಾ.29ರಂದು ಕ್ಷೀರಾಭಿಷೇಕ, ಊರಿನ ಗ್ರಾಮ ದೇವರುಗಳಿಗೆ ಆರತಿಗಳು ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ನಗರದ ತೇರಿನ ಬೀದಿಯ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀರಾಮ ನವಮಿ ಅಂಗವಾಗಿ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಹಾಗೂ ಪೂಜಾ ಕಾರ್ಯ ಕ್ರಮಗಳು ನಡೆದವು. ಸಂಜೆ ವಿವಿಧ ಕಲಾತಂಡಗಳೊಡನೆ ಸೀತಾ ರಾಮ ಲಕ್ಷ್ಮಣ ಸಮೇತ ಆಂಜನೇಯಸ್ವಾಮಿಯ ಉತ್ಸವ ನಡೆಯಲಿದೆ.
ಉಳಿದಂತೆ ನಗರದ ತೇರಿನ ಬೀದಿ ಕೋದಂಡರಾಮ ದೇವಾಲಯ, ಖಾಸ್‌ಬಾಗ್ನ ಶ್ರೀ ರಾಮ ಮಂದಿರ, ರೇಲ್ವೆ ನಿಲ್ದಾಣದ ಬಳಿಯ ಆಂಜನೇಯಸ್ವಾಮಿ ದೇವಾಲಯ ಶಿವಪುರ ಗೇಟ್ ಬಳಿಯ ಶ್ರೀರಾಮ ದೇವಾಲಯ, ರೋಜಿಪುರದ ಶ್ರೀ ಆಂಜನೇಯಸ್ವಾಮಿ ದೇವಾಲಯ, ಕೆರೆ ಏರಿ ಆಂಜನೇಯಸ್ವಾಮಿ ದೇವಾಲಯ, ಮೊದಲಾದೆಡೆ ವಿಶೇಷ ಪೂಜಾ ಕಾರ್ಯಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಆರೂಢಿ ಗ್ರಾಮದ ಬಲಮುರಿ ಗಣೇಶ ದೇವಾಲಯದ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಾನಕ, ಕೋಸಂಬರಿ ವಿತರಿಸಲಾಯಿತು.
ರಾಮದೇವನಹಳ್ಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮೋತ್ಸವದ ಅಂಗವಾಗಿ ವಿಶೇಷ ಪೂಜಾ ಕಾರ್ಯಲಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.