ದೊಡ್ಡಬಳ್ಳಾಪುರ: ಕೆಲವೇ ನಿಮಿಷಗಳ ಹಿಂದಷ್ಟೇ ಮುಂದೂಡಲಾಗಿದ್ದ ಶೋಭಾಯಾತ್ರೆಯನ್ನು (Sobhayatre) ಅಚ್ಚರಿಯ ಬೆಳವಣಿಗೆಯಲ್ಲಿ ನಾಳೆಯೇ (ಮಾ.29) ಪೂರ್ವ ನಿಯೋಜನೆಯಂತೆ ನಡೆಸಲು ತೀರ್ಮಾನಿಸಲಾಗಿದೆ.

ಈ ಕುರಿತು ವಿಶ್ವ ಹಿಂದೂಪರಿಷತ್ ಬಂಜರಂಗದಳ ಮುಖಂಡ ನರೇಶ್ ರೆಡ್ಡಿ ಮಾಹಿತಿ ನೀಡಿದ್ದು, ಸಂಜೆ ನಡೆದ ಪ್ರತಿಭಟನೆ ಬಳಿಕ ಶಾಸಕರಾದ ಧೀರಜ್ ಮುನಿರಾಜು ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಪ್ರತಿ ವರ್ಷದಂತೆ ಶೋಭಾಯಾತ್ರೆ ನಡೆಸಲು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಶೋಭಾಯಾತ್ರೆಯಲ್ಲಿ (Shobhayatre) ಡಿಜೆ (DJ) ಬಳಸಲು ಅನುಮತಿ ಕುರಿತು ದೊಡ್ಡಬಳ್ಳಾಪುರ ಟೌನ್ ಪೊಲೀಸ್ ಠಾಣೆ ಬಳಿ ಸಂಜೆಯಿಂದ ಹೈಡ್ರಾಮ ನಡೆಯಿತು.
ಬಳಿಕ ನಾಳೆ ನಡೆಯಬೇಕಿದ್ದ ಶೋಭಾಯಾತ್ರೆಯನ್ನು ಮುಂದೂಡಿ, ನ್ಯಾಯಾಲಯದ ಅನುಮತಿ ಬಳಿಕ ನಡಸಲಾಗುವುದೆಂದು ತೀರ್ಮಾನಿಸಲಾಯಿತು.
ಆದರೆ ಏಕಾಏಕಿ ಶಾಸಕ ಧೀರಜ್ ಮುನಿರಾಜು ಅವರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ, ಬಳಿಕನಾಳೆಯೇ ಶೋಭಾಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ.