ಚಿಕ್ಕಬಳ್ಳಾಪುರ: ವಾಯು ಭಾರ ಕುಸಿತ ಅಕಾಲಿಕ ಮಳೆಯಿಂದ ಬರದನಾಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮುದುಗಾನಕುಂಟೆ ಗ್ರಾಮದ ಶ್ರೀ ಗಂಗಾಭಾಗೀರಥಿ ದೇವಾಲಯ ಸಂಪೂರ್ಣ ಜಲಾವೃತವಾಗಿದೆ.
ಮುದಗಾನಕುಂಟೆ ಮೈದುಂಬಿರುವ ಪರಿಣಾಮ ಕೆರೆಯ ಹಿನ್ನೀರಿನಲ್ಲಿ ದೇಗುಲ ಮುಳುಗಡೆಯಾಗಿದೆ. ದೇವಾಲಯ, ಕಲ್ಯಾಣಿ, ದೇವಿಯ ಪಾದಗಳು, ನೀರಿನಲ್ಲಿ ಮುಳುಗಡೆ ಆಗಿದ್ದು ಭಕ್ತರ ಪ್ರವೇಶಕ್ಕೆ ತಡೆ ಬಿದ್ದಿದೆ. ಅಂದಹಾಗೆ ಮುದಗಾನಕುಂಟೆಯ ಕೆರೆಯ ಹಿನ್ನೀರಿನ ಪ್ರದೇಶದಲ್ಲಿ ದೇವಾಲಯವಿದೆ.
ಇನ್ನೂ ಪ್ರತಿ ಸೋಮವಾರ ಈ ದೇವಾಲಯಕ್ಕೆ ಸಾವಿರಾರು ಮಂದಿ ಮಹಿಳೆಯರು ಆಗಮಿಸಿ ಗಂಗಾ ಭಾಗೀರಥಿ ತಾಯಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅದರಲ್ಲೂ ಮಕ್ಕಳಾಗದಂತಹ ದಂಪತಿಗಳು, ಹರಕೆ ಹೊತ್ತುಕೊಂಡು ಈ ದೇವಾಲಯಕ್ಕೆ ಆಗಮಿಸಿ, ಪೂಜೆ ಸಲ್ಲಿಸಿದ್ರೆ ಮಕ್ಕಳಾಗುತ್ತೆ ಎಂಬ ನಂಬಿಕೆ ಭಕ್ತರದ್ದು. ಹೀಗಾಗಿ ಸೋಮವಾರದಂದು ದೇವಾಲಯದ ಬಳಿ ಜಾತ್ರೆ ಹಬ್ಬದ ರೀತಿಯ ವಾತಾವರಣ ಇರುತ್ತೆ.
ದೇವಾಲಯಕ್ಕೆ ಬರುವ ಮಹಿಳಾ ಭಕ್ತರು ದೇವಾಲಯದ ಮುಂಭಾಗದ ಕಲ್ಯಾಣಿಯಲ್ಲಿ ಸ್ನಾನ ಮಾಡಿ, ದೇವಾಲಯದ ಆವರಣದಲ್ಲಿ ಬಾಳೆ ಎಲೆ ಹಾಕಿ 5 ಕಲ್ಲುಗಳನ್ನ ಇಟ್ಟು ಅಕ್ಕಿ, ಬೇಳೆ, ಬೆಲ್ಲ ಮುಡಿಪಿಟ್ಟು ತಾಯಿಗೆ ಪೂಜೆ ಸಲ್ಲಿಸುತ್ತಾರೆ. ತದನಂತರ ದೇವಾಲಯದ ಬಳಿಯ ಗಂಗಾಭಾಗೀರಥಿ ತಾಯಿಯ ಪಾದ ಪೂಜೆ ಮಾಡಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಇನ್ನೂ ಸಂಜೆ ಸರ‍್ಯಾಸ್ತಮವಾದ ನಂತರ ಇಲ್ಲಿ ಯಾರು ಇರುವ ಆಗಿಲ್ಲ ಇರೋದಿಲ್ಲ..ಇಲ್ಲಿ ರಾತ್ರಿ ವೇಳೆ ದೇವಿ ಸಂಚಾರ ಮಾಡ್ತಾರೆ ಅನ್ನೋ ನಂಬಿಕೆ ಸಹ ಇದೆ.
22 ವರ್ಷಗಳ ನಂತರ ಜಲಾವೃತವಾದ ದೇಗುಲ: 22 ವರ್ಷಗಳ ಹಿಂದೆ ಅತಿಯಾದ ಮಳೆಯಾಗಿ ಮುದುಗಾನಕುಂಟೆ ಕೆರೆ ತುಂಬಿದ್ದ ಆಗ ದೇವಾಲಯ ಸಹ ಜಲಾವೃತವಾಗಿತ್ತು. ಅದಾದ ನಂತರ ಈಗ ಮತ್ತೆ ಅತಿಯಾದ ಮಳೆಯಿಂದ ಈ ಬಾರಿ ದೇಗುಲ ಜಲಮಯವಾಗಿದೆ. ಇನ್ನೂ ಎಂದಿನಂತೆ ಭಕ್ತರು ಬರಲು ಯಾವುದೇ ಅಡ್ಡಿ ಇಲ್ಲ.
ಗಂಗಾಭಾಗೀರಥಿ ಅಮ್ಮನವರ ದರ್ಶನ ಮಾಡಲು ಆಗದಿದ್ರೂ ಕೆರೆಯ ನೀರಿನ ದಡದ ಬಳಿಯೇ ಪೂಜೆ ಮಾಡಿಕೊಂಡು ಹೋಗಬಹುದು, ಇನ್ನೂ ಕಲ್ಯಾಣಿಯಲ್ಲಿ ಸ್ನಾನ ಮಾಡಲು ಅವಕಾಶವಿಲ್ಲ.
ನಲ್ಲಿಗಳ ಸಂಪರ್ಕವಿದ್ದು ಅಲ್ಲಿ ಸ್ನಾನ ಮಾಡಿ ನಂತರ ಪೂಜೆ ಮಾಡಬಹುದು ಅಂತ ಮುದುಗಾನಕುಂಟೆ ಗ್ರಾಮಸ್ಥರು ದೇವಾಲಯದ ಧರ್ಮಕರ್ತರು ತಿಳಿಸಿದ್ದಾರೆ. ಇನ್ನೂ ಎರಡು ಮೂರು ದಿನ ಭಾರೀ ಮಳೆ ಸಾಧ್ಯತೆಯಿದ್ದು ಮತ್ತಷ್ಟು ಕೆರೆ ಮೈದುಂಬಿಕೊಂಡರೆ ದೇವಾಲಯ ಮತ್ತಷ್ಟು ಮುಳಗಡೆ ಆಗಲಿದೆ. ಈಗಾಗಲೇ 3-4ಅಡಿ ನೀರು ತುಂಬಿಕೊಂಡಿದೆ. ದೇವಾಲಯಕ್ಕೆ ಜಲದಿಗ್ಬಂದನವಾಗಲಿದೆ.
ಕೆರೆ ಹೂಳೆತ್ತಿಸಿದ್ದ ಐಎಎಸ್ ಅಧಿಕಾರಿ ವರಪ್ರಸಾದ್ ರೆಡ್ಡಿ: ಇನ್ನೂ ಕೆರೆ ತುಂಬಿರೋದು ಜನರಿಗೆ ಬಹಳ ಸಂತಸ ತಂದಿದೆ. ಈ ಕೆರೆ 22 ವರ್ಷಗಳಿಂದ ತುಂಬೇ ಇರಲಿಲ್ಲ. ಕೆಎಎಸ್ ಅಧಿಕಾರಿಯಾದ ವರಪ್ರಸಾದ್ ರೆಡ್ಡಿಯವರು ಸ್ಥಳೀಯ ಆರ್ ಎಸ್ ಎಸ್ ಮುಖಂಡರ ಜೊತೆಗೂಡಿ ಸೇವಾ ಪ್ರತಿಷ್ಟಾನ ಸಂಸ್ಥೆಯ ಮೂಲಕ ಕೆರೆಯ ಹೂಳೆತ್ತಿಸಿದ್ರು. ಅದಲ್ಲದೇ ಕೆರೆಗೆ ಸಂಪರ್ಕಿಸುವ ಎಲ್ಲಾ ಕಾಲುವೆಗಳನ್ನ ಕ್ಲಿಯರ್ ಮಾಡಿಸಿದ್ರು. ಅದರ ಪರಿಣಾಮವೇ ಇಂದು ಕೆರೆ ತುಂಬಿಕೊಂಡಿದೆ. ಬಹಳ ಸಂತಸ ತಂದಿದೆ ಅಂತ ವರಪ್ರಸಾದ್ ರೆಡ್ಡಿಯವರ ಕಾರ್ಯವನ್ನ ಜನ ಶ್ಲಾಘಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……