ಬೆಂ.ಗ್ರಾ.ಜಿಲ್ಲೆ: ಗ್ರಾಮಗಳಿಗೆ ಕೋವಿಡ್-19 ಲಸಿಕಾಕರಣ ತಂಡ

ಬೆಂ.ಗ್ರಾ.ಜಿಲ್ಲೆ: ಕೋವಿಡ್-19 ವೈರಾಣುವಿನ ಹೊಸ ರೂಪಾಂತರಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಡಿಸೆಂಬರ್ 31ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಗ್ರಾಮಗಳಿಗೆ ವೈದ್ಯಕೀಯ ತಂಡಗಳು ಭೇಟಿ ನೀಡಿ ಲಸಿಕೆ ನೀಡಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ. 

ವೈದ್ಯಕೀಯ ತಂಡಗಳು ಡಿಸೆಂಬರ್ 31ರಂದು ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ವ್ಯಾಪ್ತಿಯ ಗ್ರಾಮಗಳಾದ ತಿಮ್ಮಸಂದ್ರ, ವಾಪಸಂದ್ರ, ಕಂಬಲಿಪುರ, ಎಂ.ಸತ್ಯವಾರ, ಬೆಂಡಿಗಾನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ದ್ಯಾವಸಂದ್ರ, ದೊಡ್ದಾರಲ್ಗೆರೆ, ಮುತ್ಸಂದ್ರ ವ್ಯಾಪ್ತಿಯ ಗ್ರಾಮಗಳಾದ ಕಲಕುಂಟೆ ಅಗ್ರಹಾರ, ನಾರಾಯನಕೆರೆ, ಅನುಗೊಂಡನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ತಿರುವರಂಗ, ಹಾರೋಹಳ್ಳಿ, ಖಾಜಿಹೊಸಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಬೊಮ್ಮನಬಂಡೆ, ಗೆದ್ದಲಪುರ, ಕೋಡಿಹಳ್ಳಿ, ಡಿ.ಹೊಸಹಳ್ಳಿ, ನಂದಗುಡಿ ವ್ಯಾಪ್ತಿಯ ಗ್ರಾಮಗಳಾದ ಚಿಕ್ಕಕೋಳಿಗ, ಗುದಪ್ಪನಹಳ್ಳಿ, ಇ ಮುತ್ಸಂದ್ರ, ಗುಲ್ಲಹಳ್ಳಿ, ಹೊಸಕೋಟೆ ಜಿ.ಹೆಚ್ ವ್ಯಾಪ್ತಿಯ ಗ್ರಾಮಗಳಾದ ಪಾರ್ವತಿಪುರ, ಗೌತಮ್ ಕಾಲೋನಿ, ಮುಗಬಾಳ ವ್ಯಾಪ್ತಿಯ ಗ್ರಾಮಗಳಾದ ಹೊಸಹಳ್ಳಿ, ಗೊತ್ತಿಪುರ, ಪೂಜಾ ರಾಮನಹಳ್ಳಿ, ಚನಧಲ್ಲಿ, ಯಲಚಲ್ಲಿ, ಜಡಿಗೇನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಗೊಣಕನಹಳ್ಳಿ, ಹರಳೂರು, ಕಟ್ಟಿಗೇನಹಳ್ಳಿ, ತಗ್ಗಲಿ ಹೊಸಹಳ್ಳಿ, ಚಿಕ್ಕತಗ್ಗಲಿ, ಬೈಲನರಸಪುರ ವ್ಯಾಪ್ತಿಯ ಗ್ರಾಮಗಳಾದ ಸರ್ಕನೂರು, ಏಟಿನೋದ್ಯಾಪುರ, ಅರೇಹಳ್ಳಿ, ಕಾರೇಹಳ್ಳಿ, ಹೊಸಕೋಟೆ ಯು.ಪಿ.ಹೆಚ್.ಸಿ ವ್ಯಾಪ್ತಿಯ ಗ್ರಾಮಗಳಾದ ಖಾಜಿ ಮೊಹಲ್ಲಾ 2, ಎ.ಆರ್. ಎಸ್ಟ್ನ್, ಕನಕ ನಗರ್, ಕನಕ ನಗರ್ 1, ಗಂಗಮ್ಮ ಗುಡಿ, ಶಿವನಪುರ ವ್ಯಾಪ್ತಿಯ ಲಿಂಗಪುರ ಗ್ರಾಮದಲ್ಲಿ ಲಸಿಕಾಕರಣ ನಡೆಯಲಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಆರೂಡಿ ವ್ಯಾಪ್ತಿಯ ವಡ್ಡನಹಳ್ಳಿ ಗ್ರಾಮ, ದೊಡ್ಡಹೆಜ್ಜಾಜ್ಜಿ ವ್ಯಾಪ್ತಿಯ ಗ್ರಾಮಗಳಾದ ಕೆಸ್ತೂರು, ಶ್ರವಣೂರ್, ಕೂಗೋನಹಳ್ಳಿ, ಹಣಬೆ, ದೊಡ್ಡತುಮಕೂರು ವ್ಯಾಪ್ತಿಯ ಗ್ರಾಮಗಳಾದ ಕರೇನಹಳ್ಳಿ -2, ಜಿಂಕೆಬಚ್ಚಹಳ್ಳಿ, ಅರೇಹಳ್ಳಿ ಗುಡ್ಡದಹಳ್ಳಿ, ಕರೇನಹಳ್ಳಿ, ಕಸುವನಹಳ್ಳಿ, ಜಿ.ಹೊಸಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಕಾಡುಬೈರಹಳ್ಳಿ, ಸಿರವಾರ, ಕಲ್ಲುದೇವನಹಳ್ಳಿ, ಗುಂಡುಮ್ಗೆರ್, ಹುಲಿಕುಂಟೆ ವ್ಯಾಪ್ತಿಯ ಗ್ರಾಮಗಳಾದ ಭದ್ರಾಪುರ, ಭಕ್ತರಹಳ್ಳಿ, ಆಲಪ್ಪನಹಳ್ಳಿ, ಗುರುವಯ್ಯನಪಾಳ್ಯ, ಬೆಣಚಿಹಟ್ಟಿ, ಹನುಮಂಥಯ್ಯನ ಪಾಳ್ಯ, ಕಾಡನೂರು ವ್ಯಾಪ್ತಿಯ ಹದ್ರಿಪುರ ಗ್ರಾಮ, ಕಮ್ಮಸಂದ್ರ ವ್ಯಾಪ್ತಿಯ ಯಲ್ಲದಹಳ್ಳಿ ಗ್ರಾಮ, ಕನಸವಾಡಿ ವ್ಯಾಪ್ತಿಯ ಗ್ರಾಮಗಳಾದ ಇಸ್ತುರು ಕಾಲೋನಿ, ಚನ್ನದೇವಿ ಅಗ್ರಹಾರ, ಕೊಡಿಪಾಳ್ಯ, ಕೊನಘಟ್ಟ ವ್ಯಾಪ್ತಿಯ ಗ್ರಾಮಗಳಾದ ಶಿವಪುರ, ರಘುನಾಥಪುರ, ಅಂಚರಹಳ್ಳಿ, ಸೊಣ್ಣಪ್ಪನಹಳ್ಳಿ, ಕೋನೆನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಚಿಕ್ಕೇನಹಳ್ಳಿ, ಕೊನೆನಹಳ್ಳಿ, ಹಳೇಕೋಟೆ, ಅಕ್ಕತಮ್ಮನಹಳ್ಳಿ, ಲಿಂಗಪುರ, ಮರಳೇನಹಳ್ಳಿ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮ, ಎಸ್.ಎಸ್ ಘಾಟಿ ವ್ಯಾಪ್ತಿಯ ಗ್ರಾಮಗಳಾದ ಕರೇನಹಳ್ಳಿ, ವಡೇರಹಳ್ಳಿ, ಬಚ್ಚಹಳ್ಳಿ, ಗೊಲ್ಲಹಳ್ಳಿ, ಕೆಳಗಿನಂಜುಗನಹಳ್ಳಿ, ಸಾಸಲು ವ್ಯಾಪ್ತಿಯ ಗ್ರಾಮಗಳಾದ ಅಡಕವಳ, ಮಲ್ಲೇಗೌಡನಹಳ್ಳಿ, ಶಿರಸ್ತೆದಾರನಪಾಳ್ಯ, ಅವಳಯ್ಯನಪಾಳ್ಯ, ಶ್ರೀರಾಮನಹಳ್ಳಿ, ತೂಬಗೆರೆ ವ್ಯಾಪ್ತಿಯ ಗ್ರಾಮಗಳಾದ ಲಕ್ಕಸಂದ್ರ, ಚಿಕ್ಕಮುದ್ದೇನಹಳ್ಳಿ, ಲಕ್ಷ್ಮೀದೇವಿಪುರ, ಕರ್ಣಳ, ನರಗನಹಳ್ಳಿ, ತಿಮ್ಮೋಜನಹಳ್ಳಿ, ದೊಡ್ಡಬಳ್ಳಾಪುರ ವ್ಯಾಪ್ತಿಯ ಗ್ರಾಮಗಳಾದ ಫಾಲನಜೋಗಿಹಳ್ಳಿ, ನಾಗಸಂದ್ರ, ಯು.ಪಿ.ಹೆಚ್.ಸಿ ವ್ಯಾಪ್ತಿಯ ಗ್ರಾಮಗಳಾದ ಕುಚಪ್ಪಪೇಟೆ, ಕಲ್ಪೇಟೆ, ಡಿಆರ್ ನಗರ್, ತ್ಯಾಗರಾಜ ನಗರ್ ಲಸಿಕಾಕರಣ ನಡೆಯಲಿದೆ.

ನೆಲಮಂಗಲ ತಾಲ್ಲೂಕಿನ ಬೈರನಾಯಕನಹಳ್ಳಿ ವ್ಯಾಪ್ತಿಯ ಕೆ.ಜಿ.ಶ್ರೀನಿವಾಸಪುರ ಗ್ರಾಮ, ದಾಬಸ್ ಪೇಟೆ ವ್ಯಾಪ್ತಿಯ ಗ್ರಾಮಗಳಾದ ಇ ಮಾಚನಹಳ್ಳಿ, ಇ ಮಾಚನಹಳ್ಳಿ ಪಾಳ್ಯ, ನರಸೀಪುರ, ದೇವರಟ್ಟಿಪಾಳ್ಯ, ಸಾಲಟ್ಟಿ, ಬೆಟ್ಟದಹೊಸಹಳ್ಳಿ, ಲಕ್ಷ್ಮೀಪುರ, ಪಾರ್ವತಿಪುರ, ಹಸಿರುಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ದೇಗಾನಹಳ್ಳಿ, ಪಾಪಭೋವಿಪಾಳ್ಯ, ಧೇಣ್ಣೆಪಾಳ್ಯ, ಅನಂತಪುರ, ಯರಮಂಚನಹಳ್ಳಿ, ವೀರನಂಜಿಪುರ, ಮೊದಲಕೋಟೆ ವ್ಯಾಪ್ತಿಯ ಗ್ರಾಮಗಳಾದ ವಾಜರಹಳ್ಳಿ, ಕಾವೇರಿ ಲೇಔಟ್, ಸಾವೇರಿಯ ಲೇಔಟ್, ಮಾರುತಿ ಲೇಔಟ್, ಜ್ಯೋತಿ ನಗರ, ಬೈರವೇಶ್ವರ ಲೇಔಟ್, ಪೊಲೀಸ್ ಲೇಔಟ್, ಕೊತ್ತನಹಳ್ಳಿ, ಅವಳಕುಪ್ಪೆ, ಹೊಸಳ್ಳಿ, ಬಾಣಸವಾಡಿ, ಬಜ್ಜೆಗೌಡನಪಾಳ್ಯ, ಮಣ್ಣೆ ವ್ಯಾಪ್ತಿಯ ಗ್ರಾಮಗಳಾದ ಗೊಲ್ಲರಹಟ್ಟಿ, ಸೋಮಸಾಗರ, ಡಿ. ಮಂಡಲ, ಮಾರ ಗೊಂಡನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಗೆದ್ದಲಹಳ್ಳಿ ಪಾಳ್ಯ, ಆಲದಹಳ್ಳಿ, ಹನುಮಂಥಪುರ, ಗುಂಡೇನಹಳ್ಳಿ, ಇಂದಿರಾನಗರ, ಮಾಚನಹಳ್ಳಿ, ಮಾಚನಹಳ್ಳಿ ಕಾಲೋನಿ, ಮಹಿಮಾಪುರ, ಬಾಪೂಜಿನಗರ್, ಶಿವಗಂಗೆ ವ್ಯಾಪ್ತಿಯ ಗ್ರಾಮಗಳಾದ ಸಿ.ಟಿ.ಪಾಳ್ಯ, ಹೊಸಹಳ್ಳಿ, ಕೆಂಗಲ್ ಕೆಂಪುಹಳ್ಳಿ, ಬೈಲಿನಕೋಟೆ, ಎಡೆಹಳ್ಳಿ, ತಡಸೀಘಟ್ಟ ವ್ಯಾಪ್ತಿಯ ಗ್ರಾಮಗಳಾದ ನರಸಾಪುರ, ಓಬಳಾಪುರ, ಕೃಷ್ಣರಾಜಪುರ, ಹಾಡಿಹೊಸಹಳ್ಳಿ, ಕಾರೇಹಳ್ಳಿ, ಎಲೆಕ್ಯಾತನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಮುದ್ದೇನಹಳ್ಳಿ, ಅಯಣ್ಣನತೋಟ, ತ್ಯಾಮಗೊಂಡ್ಲು ವ್ಯಾಪ್ತಿಯ ಗ್ರಾಮಗಳಾದ ನಾಗಯನಪಾಳ್ಯ, ಕಾಲಾಳುಗಟ್ಟ, ಗೋವೇನಹಳ್ಳಿ, ಅಲನಾಯಕನಹಳ್ಳಿ, ಹನುಮಂತೇಗೌಡನ ಪಾಳ್ಯದಲ್ಲಿ ಲಸಿಕಾಕರಣ ನಡೆಯಲಿದೆ.

ದೇವನಹಳ್ಳಿ ತಾಲ್ಲೂಕಿನಲ್ಲಿ ಕುಂದಾಣ ವ್ಯಾಪ್ತಿಯ ಗ್ರಾಮಗಳಾದ ದಿಣ್ಣೆ ಸೋಲೂರು, ಶೆಟ್ಟರಹಳ್ಳಿ, ಕನ್ನಮಂಗಲ, ವಿಜಯಪುರ ವ್ಯಾಪ್ತಿಯ ಗ್ರಾಮಗಳಾದ ಆನಂದ ನಗರ, ರಹಮತ್ ನಗರ, ಚನ್ನರಾಯಪ್ಪ ಲೇಔಟ್, ಶಾಂತಿ ನಗರ, ಬೂದಿಗೆರೆ ವ್ಯಾಪ್ತಿಯ ಗಂಗಾವರ ಗ್ರಾಮ, ಅರದೇಶನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಟಿ.ಹೊಸಹಳ್ಳಿ, ಕೆಂಪಲಿಂಗಪುರ, ಕೆಂಪಾತಿಮ್ಮನಹಳ್ಳಿ, ವಿಶ್ವನಾಥಪುರ ವ್ಯಾಪ್ತಿಯ ಗ್ರಾಮಗಳಾದ ಸುಣ್ಣಘಟ್ಟ, ಆವತಿ ವ್ಯಾಪ್ತಿಯ ಗ್ರಾಮಗಳಾದ ಹಾರೋಹಳ್ಳಿ, ಬೈರಾಪುರ, ಚನ್ನರಾಯಪಟ್ಟಣ ವ್ಯಾಪ್ತಿಯ ಗ್ರಾಮಗಳಾದ ಹ್ಯಾಡಾಳ, ಧಿನ್ನೂರು, ಎನ್.ಎನ್. ಹಳ್ಳಿ, ಪಾಳ್ಯ, ಕೊಯಿರ ವ್ಯಾಪ್ತಿಯ ಶ್ಯಾನ್ಯಾಪ್ನಲ್ಲಿ ಗ್ರಾಮ, ನಲ್ಲೂರು ವ್ಯಾಪ್ತಿಯ ಗ್ರಾಮಗಳಾದ ಹರಳೂರು, ಮುದ್ದೇನಹಳ್ಳಿ, ಪೊಲನಹಳ್ಳಿ, ತೇಲೋಹಳ್ಳಿ, ಬೂದಿಹಾಳ, ಕಾರಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ನೀಲೇರಿ, ದಾಸರಹಳ್ಳಿ, ಡಿ.ಎಸ್. ಹಳ್ಳಿ, ಜಿ.ಎಮ್ ಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಚಿಕ್ಕನಹಳ್ಳಿ, ಪುರ, ಚಂದೇನಹಳ್ಳಿ, ದೇವನಹಳ್ಳಿ ಜಿ.ಹೆಚ್ ವ್ಯಾಪ್ತಿಯ ಗ್ರಾಮಗಳಾದ ಪರ್ವಥಪುರ, ನೀಲೇರಿ, ದೇವನಹಳ್ಳಿಯಲ್ಲಿ ಲಸಿಕಾಕರಣ ನಡೆಯಲಿದೆ. 

ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆಯದೆ ಬಾಕಿ ಉಳಿಸಿಕೊಂಡಿರುವ ಫಲಾನುಭವಿಗಳು ಕೋವಿಡ್-19 ಲಸಿಕಾಕರಣ ಮೇಳದಲ್ಲಿ ಭಾಗವಹಿಸಿ, ಲಸಿಕೆಯನ್ನು ಕಡ್ಡಾಯವಾಗಿ ಪಡೆಯುವ ಮೂಲಕ, ಶೇ.100ರಷ್ಟು ಲಸಿಕಾಕರಣ ಪ್ರಗತಿಯನ್ನು ಸಾಧಿಸಲು ಸಹಕಾರ ನೀಡಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಸೋನಮ್ ವಾಂಗ್ಚುಕ್ ಬಂಧನ ರದ್ದು

ಸೋನಮ್ ವಾಂಗ್ಚುಕ್ ಬಂಧನ ರದ್ದು

6 ತಿಂಗಳ ನಂತರ ಸೋನಮ್ ವಾಂಗ್ಚುಕ್ (Sonam Wangchuk) ಜೈಲಿನಿಂದ ಬಿಡುಗಡೆಯಾಗಲಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಂಧನ ರದ್ದುಗೊಳಿಸಿದೆ.

[ccc_my_favorite_select_button post_id="120204"]
ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರೆ ನೀಡಿದರು.

[ccc_my_favorite_select_button post_id="119685"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ದೊಡ್ಡಬಳ್ಳಾಪುರ: ಮಾರಮ್ಮ ದೇವಾಲಯದಲ್ಲಿ ಮಾಂಗಲ್ಯ ಕದ್ದ ದುಷ್ಕರ್ಮಿಗಳು..!

ದೊಡ್ಡಬಳ್ಳಾಪುರ: ಮಾರಮ್ಮ ದೇವಾಲಯದಲ್ಲಿ ಮಾಂಗಲ್ಯ ಕದ್ದ ದುಷ್ಕರ್ಮಿಗಳು..!

ಮಾರಮ್ಮ ದೇವಾಲಯದಲ್ಲಿ (Maramma's temple) ಮಾರಮ್ಮ ದೇವಿಗೆ ಅಳವಡಿಸಿದ್ದ ಮಾಂಗಲ್ಯವನ್ನು ಕದ್ದಿರುವ ಕಳ್ಳರು ಪರಾರಿಯಾಗಿರುವ ಘಟನೆ ತಾಲೂಕಿನ ***** ಭಾನುವಾರ ರಾತ್ರಿ ನಡೆದಿದೆ.

[ccc_my_favorite_select_button post_id="120077"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ಬೆಳ್ಳಂಬೆಳಗ್ಗೆ ಕ್ಯಾಂಟರ್ ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ (Accident), ಬೈಕ್ ಸವಾರ ಗಾಯಗೊಂಡಿರುವ ಘಟನೆ ಚನ್ನಾದೇವಿ ಅಗ್ರಹಾರದ ಬಳಿ ಇಂದು ಮುಂಜಾನೆ 5,30 ರ ವೇಳೆಗೆ ಸಂಭವಿಸಿದೆ.

[ccc_my_favorite_select_button post_id="120173"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!