ನವದೆಹಲಿ: ಅಮೇರಿಕಾದ ನ್ಯಾಯಾಲಯದಿಂದ ಭಾರತದ ಪ್ರಖ್ಯಾತ ಉದ್ಯಮಿ ಗೌತಮ್ ಅದಾನಿ ಬಂಧನದ ವಾರೆಂಟ್ ಬಗ್ಗೆ ಕೇಂದ್ರ ಸರ್ಕಾರ ದಿವ್ಯ ಮೌನ ವಹಿಸಿದೆ ಎಂದು ಸಂಸತ್ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ.
ಗೌತಮ್ ಅದಾನಿ ಬೆನ್ನಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿಂತಿದೆ. ಅವರನ್ನ ಅರೆಸ್ಟ್ ಮಾಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಸಾವಿರಾರು ಕೋಟಿ ಭ್ರಷ್ಟಾಚಾರ ನಡೆಸಿದ್ದರೂ ಅದಾನಿಯನ್ನ ರಕ್ಷಿಸುವ ಕೆಲಸ ಆಗ್ತಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.
ಈ ಸರ್ಕಾರದ ಅವಧಿಯಲ್ಲಿ ಸಾವಿರಾರು ಜನರನ್ನ ಸಣ್ಣ ತಪ್ಪಿಗೆ ಅರೆಸ್ಟ್ ಮಾಡಲಾಗುತ್ತಿದೆ. ಜೈಲಿನಲ್ಲಿರಬೇಕಾದ ಅದಾನಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ.
ಅಮೆರಿಕ ಕೋರ್ಟ್ ಸಾವಿರಾರು ಕೋಟಿ ಹಗರಣ ಮಾಡಿರುವ ಕುರಿತು ಛೀಮಾರಿ ಹಾಕಿದ್ದರೂ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೌನ ವಹಿಸಿದೆ ಎಂದು ರಾಹುಲ್ ಗಾಂಧಿ ಕೆಂಡಕಾರಿದ್ದಾರೆ.