ಬೆಂಗಳೂರು: ನಗರದ ಕೆಂಪಾಪುರದಲ್ಲಿ ಇಂದು ಉದ್ಘಾಟನೆಗೊಂಡ ನೂತನ ಒಳಾಂಗಣ ಸ್ಟೇಡಿಯಂನಲ್ಲಿನ ಈಜುಕೊಳದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅವರು ಇಂದು ಈಜಿದ್ದಾರೆ.
ಇಂದು ಕೆಂಪಾಪುರದಲ್ಲಿ ಹೊಸ ಒಳಾಂಗಣ ಕ್ರೀಡಾಂಗಣದ ಉದ್ಘಾಟನೆ ಬಳಿಕ ಈಜುಗೊಳದಲ್ಲಿ ಈಜಿ ಅಧಿಕೃತ ಚಾಲನೆ ನೀಡಿದ್ದಾರೆ.
ಇದರ ವಿಡಿಯೋವನ್ನು (Video) ಸಚಿವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
#gameon with inauguration of our newest indoor stadium at #kempapura.
— Krishna Byre Gowda (@krishnabgowda) November 30, 2024
Temp controlled 8 lane pool, 5 baddie courts , TT, Yoga hall, taekwondo hall and a functional indoor gym ! Affordable, professionally maintained and making sports and fitness available to everyone.… pic.twitter.com/qKlGvGUtzj
ಕ್ರೀಡಾಂಗಣದ ಕುರಿತು ಮಾಹಿತಿ ನೀಡಿರುವ ಸಚಿವರು, ಒಳಾಂಗಣ ಕ್ರೀಡಾಂಗಣದಲ್ಲಿ ಟೆಂಪ್ ನಿಯಂತ್ರಿತ 8 ಲೇನ್ ಪೂಲ್, 5 ಬ್ಯಾಡ್ಮಿಟನ್ ಕೋರ್ಟ್‌ಗಳು, ಟಿಟಿ, ಯೋಗ ಹಾಲ್, ಟೇಕ್ವಾಂಡೋ ಹಾಲ್ ಮತ್ತು ಕ್ರಿಯಾತ್ಮಕ ಒಳಾಂಗಣ ಜಿಮ್ ಇದೆ.
ಇದರ ಕೈಗೆಟಕುವ ದರ ವೃತ್ತಿಪರವಾಗಿ ನಿರ್ವಹಣೆ, ಕ್ರೀಡೆ ಮತ್ತು ಫಿಟ್‌ನೆಸ್ ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತದೆ ಎಂದಿದ್ದಾರೆ.