ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಹೆಗ್ಗಡಿಹಳ್ಳಿ ಪಂಚಾಯಿತಿ ವತಿಯಿಂದ ದಂಡದಾಸಕೊಡೀಗೆಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಹಳ್ಳಿ ಸಂತೆಯಲ್ಲಿ ವಿದ್ಯಾರ್ಥಿಗಳು ಸುಮಾರು 10 ಸಾವಿರಕ್ಕೂ ಹೆಚ್ಚು ವಹಿವಾಟು ನಡೆಸಿ ಅಚ್ಚರಿ ಮೂಡಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಇಒ ಮುನಿರಾಜು ಅವರ ಸೂಚನೆಯ ಮೇರೆಗೆ ಮಕ್ಕಳಸ್ನೇಹಿ ಗ್ರಾಮಪಂಚಾಯಿತಿ ಅಭಿಯಾನದ ಅಡಿಯಲ್ಲಿ ಹೆಗ್ಗಡಿಹಳ್ಳಿ ಪಂಚಾಯಿತಿ ವತಿಯಿಂದ ದಂಡದಾಸಕೊಡೀಗೆಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಇಂದು ಪೌಷ್ಟಿಕ ಆಹಾರದ ಕುರಿತು ಮಕ್ಕಳಲ್ಲಿ ಜಾಗೃತಿ ಕಾರ್ಯಕ್ರಮ ಹಾಗೂ ಮಕ್ಕಳ ಹಳ್ಳಿ ಸಂತೆ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ಸ್ವತಃ ತಾವೇ ತಮ್ಮ ಮನೆ, ಊರುಗಳಿಂದ ಸಂಗ್ರಹಿಸಿ ತಂದಿದ್ದ ವಿಶೇಷ, ತಾಜಾ ತರಕಾರಿಗಳನ್ನು ತಂದು ಗ್ರಾಹಕರ ಗಮನ ಸೆಳೆದು ಮಾರಾಟ ಮಾಡಿದರು.
ಗ್ರಾಮಪಂಚಾಯಿತಿ ಸದಸ್ಯರು, ಮಕ್ಕಳ ಪೋಷಕರು, ಗ್ರಾಹಕರು, ಶಿಕ್ಷಕರು ಸಂತೆಯಲ್ಲಿ ಮಾರಾಟ ಮಾಡಲಾದ ವಸ್ತುಗಳನ್ನು ಖರೀದಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಹೆಗ್ಗಡಿಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಮಂಜುಳ ಜಿ ನೆರವೇರಿಸಿದರು.

ಉಪಾಧ್ಯಕ್ಷ ಕುಮಾರ್ ಎಸ್.ಎನ್., ಸದಸ್ಯರಾದ ಮುನಿರಾಜು ಎಸ್.ಡಿ., ಜಗನಾಥ್.ಎನ್., ಮುನಿಕೃಷ್ಣಪ್ಪ, ಪಲ್ಲವಿ, ಮಂಜುಳಮ್ಮ, ಮುನಿರಾಜಪ್ಪ, ಎಸಿಡಿಪಿಒ ಅರುಣ್ ಕುಮಾರ್, ಪಿಡಿಒ ಸೌಮ್ಯ ವಿ., ಕಾರ್ಯದರ್ಶಿ ಕೆ.ಲಕ್ಷ್ಮಮ್ಮ, ಎಸ್ಐಆರ್ಡಿ ಸಂಪನ್ಮೂಲ ವ್ಯಕ್ತಿ ಬಯಲಾಂಜನೇಯ ಮೂರ್ತಿ, ಸಿಹೆಚ್ಒ ಪದ್ಮ, ಮುಖ್ಯಶಿಕ್ಷಕ ಸತೀಶ್ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
