ದೊಡ್ಡಬಳ್ಳಾಪುರ (Doddaballapura): ನಗರದ ನಿರಾಶ್ರಿತರ ವೃದ್ಧಶ್ರಮದಲ್ಲಿ ನಿಯಂತ್ರಣ ತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ವೃದ್ಧೆಯೋರ್ವರಿಗೆ, ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ದೊಡ್ಡಬಳ್ಳಾಪುರ ನಗರದ ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ.ಮಂಜುನಾಥ್ ನೇತೃತ್ವದ ತಂಡ ಪ್ರಶಂಸೆಗೆ ಕಾರಣವಾಗಿದೆ.
ನಗರದ ಪವಿತ್ರ ನಿರಾಶ್ರಿತರ ವೃದ್ಧಶ್ರಮದಲ್ಲಿ ಸುಮಾರು 80 ವರ್ಷದ ಪದ್ಮಮ್ಮ ಅವರು ಕಾಲು ಜಾರಿ ಬಿದ್ದು ಪರಿಣಾಮ, ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಆಕೆಗೆ ತುರ್ತು ಮೂಳೆ ಮುರಿತದ ಶಸ್ತ್ರ ಚಿಕಿತ್ಸೆ ಅಗತ್ಯವಾಗಿದ್ದು, ಕುಟುಂಬಸ್ಥರು ಇಲ್ಲದೆ ಇರುವುದನ್ನ ವೃದ್ಧಶ್ರಮದವರು ಸಿಬ್ಬಂದಿಗಳ ಗಮನಕ್ಕೆ ತಂದರು.
ಈ ವಿಷಯ ತಿಳಿದ ಡಾ.ಮಂಜುನಾಥ್ ನೇತೃತ್ವದ ಸಿಬ್ಬಂದಿಗಳು, ಖಾಸಗಿ ಆಸ್ಪತ್ರೆಯಲ್ಲಿ ಸುಮಾರು ಒಂದು ಲಕ್ಷ ವೆಚ್ಚವಾಗುತ್ತಿದ್ದ ಆಪರೇಶನ್ ಅನ್ನು ಸರ್ಕಾರಿ ಆಸ್ಪತ್ರೆಯಲ್ಲಿಯೇ ಯಶಸ್ವಿಯಾಗಿ ಮಾಡಿ, ಅಗತ್ಯ ಸೌಲಭ್ಯ ಒದಗಿಸಿ ವೃದ್ಧೆಗೆ ನೇರವಾಗಿದ್ದಾರೆ.
ಡಾ.ಮಂಜುನಾಥ್ ಅವರಿಗೆ ಡಾ.ರಮೇಶ್, ಡಾ.ರಾಜು, ಡಾ. ಪ್ರೇಮಲತಾ ಸಿಬ್ಬಂದಿಗಳು ಸಹಕಾರ ನೀಡಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದ ಗಾಯಾಳು ಪದ್ಮಮ್ಮ ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು.
