ದೊಡ್ಡಬಳ್ಳಾಪುರ: ಆರೋಗ್ಯ ಸಿಬ್ಬಂದಿಯೋರ್ವರಿಗೆ ಕರೊನಾ ಸೋಂಕು ದೃಡಪಟ್ಟಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ದೊಡ್ಡಹೆಜ್ಜಾಜಿ ಸರ್ಕಾರಿ ಆರೋಗ್ಯ ಕೇಂದ್ರವನ್ನು ಶುಕ್ರವಾರದಿಂದ 48ಗಂಟೆಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.
ಈ ಕುರಿತು ಹರಿತಲೇಖನಿಗೆ ಮಾಹಿತಿ ನೀಡಿರುವ ವೈದ್ಯಾಧಿಕಾರಿ ಡಾ.ಅಮಿತ್, ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಕರೊನಾ ಸೊಂಕು ದೃಡಪಟ್ಟಿದ್ದು, ತಾಲ್ಲೂಕು ವೈದ್ಯಾಧಿಕಾರಿ ಡಾ.ಪರಮೇಶ್ವರ ಅವರ ಸೂಚನೆಯ ಮೇರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಕೇಂದ್ರಕ್ಕೆ ಸ್ಯಾನಿಟೈಸ್ ಮಾಡಿಸಿ ಸೀಲ್ ಡೌನ್ ಮಾಡಲಾಗಿದೆ.
ಆರೋಗ್ಯ ಕೇಂದ್ರ ಸೋಮವಾರದಿಂದ ಕಾರ್ಯನಿರ್ವಹಿಸಲಿದ್ದು, ತುರ್ತು ಚಿಕಿತ್ಸೆಗೆ ಸಮೀಪದ ಕಾಡನೂರು, ಕನಸವಾಡಿ, ಹುಲಿಕುಂಟೆ ಆರೋಗ್ಯ ಕೇಂದ್ರ ಅಥವಾ ದೊಡ್ಡಬಳ್ಳಾಪುರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.